March 2, 2026
0002

ಹಿರಿಯೂರು :

ಚಿತ್ರದುರ್ಗ ಜಿಲ್ಲೆಯ ಬಯಲುಸೀಮೆಗೆ ನೀರು ಹರಿಸುವ ವಿಚಾರವಾಗಿ ಸರ್ಕಾರದ ಧೋರಣೆಯನ್ನು ಖಂಡಿಸಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಫೆಬ್ರವರಿ 4 ರಂದು ಅನಿರ್ಧಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿ, ಫೆಬ್ರವರಿ 10 ರಂದು ಹಿರಿಯೂರ್ ಬಂದ್ ಗೆ ಕರೆ ಕೊಡಲಾಗುವುದು ಎಂಬುದಾಗಿ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ತಾಲೂಕು ರೈತ ಸಂಘದ ಕಚೇರಿಯಲ್ಲಿ ರೈತಸಂಘದ ವತಿಯಿಂದ ಸಭೆ ನಡೆಸಿ, ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಘೋಷಿಸಿರುವ 5300 ಕೋಟಿ ಹಣ ಕೊಡದೆ ಬಿಡುಗಡೆಗೊಳಿಸಬೇಕು, ರಾಜ್ಯ ಸರ್ಕಾರ ಬರುವ ಬಜೆಟ್ ಅಲ್ಲಿ 5000 ಕೋಟಿ ಮೀಸಲಿಡಬೇಕು,ಕಲ್ವಳ್ಳಿ ಭಾಗದ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಾರಂಭಿಸಬೇಕು,ಐಮಂಗಳ  ಹಾಗೂ ಕಸಬಾ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಪ್ರಾರಂಭಿಸಬೇಕು

ಧರ್ಮಪುರ ಹೋಬಳಿಯ ಬಿಟ್ಟು ಹೋಗಿರುವ ಕೆರೆಗಳಿಗೆ ಹಣ ಮೀಸಲಿಟ್ಟು ಕಾಮಗಾರಿ ಪ್ರಾರಂಭಿಸಬೇಕು ಮತ್ತು ಜಿಲ್ಲೆಯ ಎಲ್ಲಾ ಮಣ್ಣಿನ ಕೆರೆಗಳಿಗೆ ನೀರು ತುಂಬಿಸಬೇಕು, ಈ ಬೇಡಿಕೆಗಳು ಈಡೇರದಿದ್ದರೆ ಫೆಬ್ರವರಿ 12 ರ ರಂದು ಹಿರಿಯೂರಿನಿಂದ ಚಿತ್ರದುರ್ಗಕ್ಕೆ, ಫೆಬ್ರವರಿ 13 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಸಮಾವೇಶ ನಡೆಸುವ ಜೊತೆಗೆ ನಿರಂತರ ಹೋರಾಟ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರೈತಸಂಘದ ತಾಲೂಕು ಅಧ್ಯಕ್ಷರಾಗಿ ಬಳಗಟ್ಟ ಸಿ.ವೆಂಕಟೇಶ್, ಗೌರವಾಧ್ಯಕ್ಷರಾಗಿ ಆಲೂರುಸಿದ್ದರಾಮಣ್ಣ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು . ಈ ಸಭೆಯಲ್ಲಿ ರೈತಮುಖಂಡರಾದ ರಂಗಸ್ವಾಮಿ, ಹಳ್ಳಿಕೆರೆ ತಿಪ್ಪೇಸ್ವಾಮಿ, ಸಣ್ಣತಿಮ್ಮಣ್ಣ, ಬಳಗಟ್ಟತಿಮ್ಮಯ್ಯ, ಮಂಜುನಾಯಕ್, ವೀರಣ್ಣಗೌಡ, ವಿರೂಪಾಕ್ಷ, ರಾಮಣ್ಣ, ಮೀಸೆಗೌಡಪ್ಪ, ಬಾಲಕೃಷ್ಣ, ಮಂಜುನಾಥ, ಶಿವಣ್ಣ, ಸಣ್ಣೀರಪ್ಪ, ನಿಂಗಪ್ಪ, ರಾಮಕೃಷ್ಣ, ಚಂದ್ರಪ್ಪ, ವೆಂಕಟೇಶ್ ಗುಡಿಹಳ್ಳಿ,  ಟಿ.ತಿಮ್ಮಯ್ಯ, ಗೋವಿಂದಪ್ಪ, ಕರಿಯಪ್ಪ, ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *