
ಹಿರಿಯೂರು:
ನಗರದ ಸುಪ್ರಸಿದ್ಧ ದಕ್ಷಿಣ ಕಾಶಿ ಶ್ರಿ ತೇರುಮಲ್ಲೇಶ್ವರಸ್ವಾಮಿಜಾತ್ರೆ ಅಂಗವಾಗಿ ಪ್ರತಿದಿನ ಮೆರವಣಿಗೆ ಮಾಡುವ ವಾಹನೋತ್ಸವದ ಗೊಂಬೆಗಳ ನವೀಕರಣ ಕಾರ್ಯ ನಡೆಸಿದ್ದು, ದೇವಾಲಯದ ಜಾತ್ರಾ ಸಮಿತಿ ಗೌರವ ಅಧ್ಯಕ್ಷರಾದ ಆರ್. ನಾಗೇಂದ್ರ ನಾಯಕ್ ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 1ಲಕ್ಷ ರೂಪಾಯಿಗಳ ವೆಚ್ಚ ಮಾಡಿ ಗೊಂಬೆಗಳನ್ನು ನವೀಕರಣ ಮಾಡಿಸಿರುವುದಾಗಿ ಮಾಧ್ಯಮಮಗಳಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ನೂತನ ಅಧ್ಯಕ್ಷರಾದ ಅನಿಲ್ ಕುಮಾರ್, ಉಪಾಧ್ಯಕ್ಷರಾದ ಜಗದೀಶ್ ಭಂಡಾರಿ, ಗೌರವಾಧ್ಯಕ್ಷರಾದ ವೆಂಕಟೇಶ್, ಸತ್ಯನಾರಾಯಣಮೂರ್ತಿ, ಗಿರೀಶ್, ಮಂಜುನಾಥ್ ನಾಯಕ್, ಶೇಖರ್, ವಿಶ್ವನಾಥಾಚಾರ್ಯ, ಮಲ್ಲೇಶಚಾರ್ಯ, ನಾಗರಾಜಚಾರ್ಯ ಸೇರಿದಂತೆ ಅನೇಕ ಯುವ ಮುಖಂಡರುಗಳು ಉಪಸ್ಥಿತರಿದ್ದರು.

