
ಹಿರಿಯೂರು:
ನಗರದ ಶ್ರೀ ವಾಸವಿ ಪಬ್ಲಿಕ್ ಶಾಲೆಯ 85 ಮಕ್ಕಳು ರಾಜ್ಯಮಟ್ಟದ ಬ್ರೈನ ತಾನ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.ಒಂದನೇ ತರಗತಿಯ ಪ್ರೀತಮ್ ಬೇರ 96 ಅಂಕಗಳು ಹಾಗೂ ಎರಡನೇ ತರಗತಿ ಪರಮೇಶ್ 95 ಅಂಕಗಳು ಪಡೆದು ರಾಜ್ಯ ಮಟ್ಟಕ್ಕೆ ದ್ವಿತೀಯಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ.
ಶಿಕ್ಷಕರ ಪರೀಕ್ಷೆಯಲ್ಲಿ ಕೋ-ಆರ್ಡಿನೇಟರ್ ರಮ್ಯಾ ಎಂ.ಜಿ. ಅವರು 95 ಅಂಕಗಳನ್ನು ಪಡೆದು ಚಿನ್ನದ ಪದಕವನ್ನು ಪಡೆದಿರುತ್ತಾರೆ. ಈ ಸಾಧಕರಿಗೆ ಜನವರಿ 18ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧುಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಇಬ್ಬರೂ ಮಕ್ಕಳಿಗೂ ಹಾಗೂ ಶಿಕ್ಷಕಿಗೂ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ 85 ಮಕ್ಕಳಿಗೂ ಹಾಗೂ ಶಿಕ್ಷಕಿಗೂ ಶ್ರೀ ವಾಸವಿ ಪಬ್ಲಿಕ್ ಶಾಲೆಯಲ್ಲಿ ಗೌರವಿಸಲಾಯಿತು. ವಾಸವಿ ಪಬ್ಲಿಕ್ ಶಾಲೆಯಲ್ಲಿ ಎಲ್ಲಾ ವಿಜೇತರಿಗೆ ಅಭಿನಂದನೆ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.
ಶ್ರೀ ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೆ.ವಿ.ಅಮರೇಶ್ ಈ ಸಂದರ್ಭದಲ್ಲಿ ಮಾತನಾಡಿ ಇದೀಗ ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಸ್ಪರ್ಧೆ ಇದ್ದು, ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ವ್ಯಾಸಂಗ ಮಾಡಿ ದೇಶದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂಬುದಾಗಿ ಅವರು ಹೇಳಿದರು.
ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು. ಸಂಕಷ್ಟದಲ್ಲಿರುವ ಮತ್ತೊಬ್ಬರಿಗೆ ಸಹಾಯ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮ ಶಾಲೆಗೆ ಕೀರ್ತಿ ತಂದಿರುವುದು ತುಂಬಾ ಮೆಚ್ಚುಗೆಗ ಪಾತ್ರವಾದ ಕಾರ್ಯವಾಗಿದೆ. ಎಂದರಲ್ಲದೆ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು.

5ನೇ ತರಗತಿ ವಿದ್ಯಾರ್ಥಿ ಆಯುಷ್ , ಒಂದನೇ ತರಗತಿ ವಿದ್ಯಾರ್ಥಿ ಪ್ರೀತಂ ಬೇರ, 2ನೇ ತರಗತಿ ವಿದ್ಯಾರ್ಥಿ ಪ್ರಮೇಶ್ ಅವರು ಪ್ರಥಮ ರ್ಯಾಂಕ್ ಬಂದಿರುವ ಹಿನ್ನಲೆಯಲ್ಲಿ ಹಾಗೂ ಕೋ-ಆರ್ಡಿನೇಟರ್ ಎಂ.ಜಿ.ರಮ್ಯಾ ಅವರು ಸಹ ಪ್ರಥಮ ರ್ಯಾಂಕ್ ಪಡೆದಿದ್ದು, ಅವರಿಗೆ 2 ಬಹುಮಾನಗಳನ್ನು ನೀಡಲಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿದ್ದಾರೆ.ಎಂ.ಎಲ್.ಸಿ. ಹಾಗೂ ಮ್ಯಾರಥಾನ್ ಅಧ್ಯಕ್ಷರಾದ ಪುಟ್ಟಣ್ಣ, ಕಾರ್ಯದರ್ಶಿ ಶಶಿಕುಮಾರ್, ಚಿತ್ರನಟಿ ಪೂಜಾಗಾಂಧಿ ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ ಕಾರ್ಯದರ್ಶಿ ಪಿ.ವಿ.ನಾಗರಾಜ್, ವಾಸವಿ ಯುವಜನ ಸಂಘದ ಅಧ್ಯಕ್ಷರಾದ ವಿ.ಜಗದೀಶ್, ಕೋ-ಆರ್ಡಿನೇಟರ್ ಎಂ.ಜಿ.ರಮ್ಯಾ ಹಾಗೂ ಶಿಕ್ಷಕ ವೃಂದದವರು ಮತ್ತು ಪೋಷಕರು ಉಪಸ್ಥಿತರಿದ್ದರು.

