March 2, 2026
0000002

ಹಿರಿಯೂರು :

ನಗರ ವ್ಯಾಪ್ತಿಯಲ್ಲಿ ಪ್ರತಿ ಬುಧವಾರದಂತೆ ಇಂದೂ ಸಹ ವಾರ್ಡ್ ನಂ 2 ರ 100 ಫೀಟ್ ರಸ್ತೆಯಲ್ಲಿ ಸಂತೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ತರಕಾರಿ, ಈರುಳ್ಳಿ, ಸೊಪ್ಪು, ಮಾರಾಟಗಾರರು ನಿಷೇದಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದು, ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದವರಿಗೆ ದಂಡ ವಿಧಿಸಲಾಗುತ್ತಿದೆ ಎಂಬುದಾಗಿ ಆರೋಗ್ಯ ನಿರೀಕ್ಷಕಿ ಶ್ರೀಮತಿ ವೈ.ಎಸ್.ಸಂಧ್ಯಾ ಹೇಳಿದರು.

ನಗರದ ವ್ಯಾಪ್ತಿಯಲ್ಲಿ ಪ್ರತಿ ಬುಧವಾರದಂತೆ ಇಂದೂ ಸಹ ವಾರ್ಡ್ ನಂ 2 ರ 100 ಫೀಟ್ ರಸ್ತೆಯಲ್ಲಿ ಸಂತೆಯಲ್ಲಿ ನಿಷೇದಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದವರಿಗೆ ದಂಡ ವಿಧಿಸಿ, ನಂತರ ಅವರು ಮಾತನಾಡಿದರು.

ನಗರಸಭೆಯ ಆರೋಗ್ಯ ನಿರೀಕ್ಷಕರುಗಳಾದ ಅಶೋಕ್ ಕುಮಾರ್, ನಯಾಜ್  ಮತ್ತು ಸ್ವಚ್ಛತಾ ಕಾರ್ಮಿಕರುಗಳು ಜಂಟಿಯಾಗಿ  ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಸುಮಾರು 10 ರಿಂದ 15 ಮಾರಾಟಗಾರರಿಗೆ  ರೂ 1850/- ಗಳನ್ನು ದಂಡ ವಿಧಿಸಲಾಯಿತು.

About The Author

Leave a Reply

Your email address will not be published. Required fields are marked *