March 2, 2026
0002

ಹಿರಿಯೂರು:

ತಾಲ್ಲೂಕಿನ ಧರ್ಮಪುರ ಗ್ರಾಮದ ಸ್ವಾಭಿಮಾನ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ  ಕೋಮಲ್ ನಾಯ್ಕ್  ರವರಿಗೆ ಚಾಮರಾಜನಗರದಲ್ಲಿ ನಡೆದ   ಬಾಲ್ ಬ್ಯಾಡ್ಮಿಂಟನ್  ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು  ಚಾಮರಾಜನಗರ ಬಾಲ್ ಬ್ಯಾಡ್ಮಿಂಟನ್  ಅಶೋಸಿಯೇಷನ್   ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ರಾಜ್ಯ ಮಟ್ಟದ ಜೂನಿಯರ್ಸ್ ಬಾಲ್  ಬ್ಯಾಡ್ಮಿಂಟನ್  ಚಾಂಪಿಯನ್ ಶಿಪ್ ನಲ್ಲಿ  ಶ್ರೇಷ್ಠ ಆಟಗಾರ ಪ್ರಶಸ್ತಿ ದೊರೆತಿದೆ.

ಇದೇ ಶಾಲೆಯ 8ನೇತರಗತಿ ವಿದ್ಯಾರ್ಥಿ  ಶಿವಕುಮಾರ್ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದಾನೆ ಎಂಬುದಾಗಿ ತರಬೇತುದಾರ, ದೈಹಿಕ ಶಿಕ್ಷಣ ಶಿಕ್ಷಕ ಮುರುಳಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹಿರಿಯೂರು ತಾಲ್ಲೂಕು ಹಾಗೂ  ಚಿತ್ರದುರ್ಗ  ಜಿಲ್ಲೆಗೆ ಕೀರ್ತಿ ತಂದ  ಕೋಮಲ್ ನಾಯ್ಕ್ ಹಾಗೂ ಶಿವಕುಮಾರ್ ಅವರನ್ನು ಚಿತ್ರದುರ್ಗ ಬಾಲ್ ಬ್ಯಾಡ್ಮಿಂಟನ್  ಅಸೋಸಿಯೇಷನ್ ಗೌರವಾಧ್ಯಕ್ಷರಾದ ಶಿವಶಂಕರ್ ಮಠದ್, ಅಧ್ಯಕ್ಷರಾದ ಶ್ರೀಧರ್ ಹಾಗೂ ಕಾರ್ಯದರ್ಶಿ ರಾಮು ಅಭಿನಂದಿಸಿದ್ದಾರೆ.

About The Author

Leave a Reply

Your email address will not be published. Required fields are marked *