March 2, 2026
2

ಹಿರಿಯೂರು:

ನಗರದ ಸುಪ್ರಸಿದ್ಧ  ಶ್ರೀ ಬನಶಂಕರಿ ದೇವರ ಬ್ರಹ್ಮ ರಥೋತ್ಸವ ಫೆಬ್ರವರಿ 1ರ ಭಾನುವಾರ ನಡೆಯಲಿದೆ. ಇದರ ಅಂಗವಾಗಿ 31ರ ಶನಿವಾರ ಬೆಳಿಗ್ಗೆ ಮಹಾಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ.

ಇದರ ಅಂಗವಾಗಿ 31ರ ಶನಿವಾರ ಬೆಳಗ್ಗೆ  ಮಹಾಗಣಪತಿ ಪೂಜೆಯೊಂದಿಗೆ  ಕಾರ್ಯಕ್ರಮಗಳು ಆರಂಭವಾಗಲಿವೆ. ನವಗ್ರಹ ಶಾಂತಿ, ಕಳಸ ಸ್ಥಾಪನೆ, ಗಣಪತಿ ಹೋಮ, ನವಗ್ರಹಶಾಂತಿ, ಹೋಮ, ಗಾಯಿತ್ರಿಹೋಮ ಹೀಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಜನವರಿ 31 ರ ಮಧ್ಯಾಹ್ನ 12 ಗಂಟೆಗೆ  ಮಹಾಮಂಗಳಾರತಿ ಇರುತ್ತದೆ. ಫೆಬ್ರವರಿ 1ರ ಭಾನುವಾರ ಬೆಳಗ್ಗೆ  6ಗಂಟೆಗೆ ಅಮ್ಮನವರಿಗೆ  ಪಂಚಾಮೃತ ಅಭಿಷೇಕ 11ಗಂಟೆಯಿಂದ 11:45ವರೆಗೆ  ಬನಶಂಕರಿ ಅಮ್ಮನವರ  ಬ್ರಹ್ಮ ರಥೋತ್ಸವ ನಡೆಯಲಿದೆ.

ಫೆಬ್ರವರಿ 1ರ ಸಂಜೆ 6.30ಕ್ಕೆ ಗೋಧೂಳೇತ್ಸವ ಇರುತ್ತದೆ. ಫೆಬ್ರವರಿ 2ರಂದು ಬೆಳಗ್ಗೆ 7 ಗಂಟೆಗೆ  ಪಂಚಾಮೃತ ಅಭಿಷೇಕ ವಸಂತೋತ್ಸವ ಇರುತ್ತದೆ. ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ  ಭಕ್ತಾದಿಗಳು  ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸುವಂತೆ ಹಿರಿಯೂರಿನ  ಶ್ರೀ ಬನಶಂಕರಿ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು  ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *