
ಹಿರಿಯೂರು:
ತಾಲ್ಲೂಕಿನ ಬಬ್ಬೂರು ಧರ್ಮಪುರ ರಸ್ತೆಯಲ್ಲಿ ನೆಲೆಸಿರುವ ಶ್ರೀಲಕ್ಷ್ಮಿ ಕಂಬದ ರಂಗನಾಥಸ್ವಾಮಿಯ ಹರಿಸೇವೆ ಉತ್ಸವ ವಿಶೇಷ ಪೂಜಾ ಕಾರ್ಯಕ್ರಮವನ್ನು ಪ್ರತಿವರ್ಷದಂತೆ ಈ ವರ್ಷವೂ 31ನೇ ಶನಿವಾರ ಭಕ್ತಿಭಾವದಿಂದ ನಡೆಸಲಾಗುತ್ತದೆ ಎಂಬುದಾಗಿ ದೇವಸ್ಥಾನದ ಮುಖ್ಯಸ್ಥರಾದ ಬಿ.ಕೃಷ್ಣಚಾರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜನವರಿ 31ನೇ ಶನಿವಾರ ಬೆಳಿಗ್ಗೆ ಅಭಿಷೇಕ, ಅರ್ಚನೆ, ಪುಷ್ಪಾಲಂಕಾರ 1ಗಂಟೆಗೆ ಮಹಾಮಂಗಳಾರತಿ ನಂತರ ಬಂದಿರುವ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಲಕ್ಷ್ಮಿಕಂಬದ ರಂಗನಾಥಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಬಿ.ಕೃಷ್ಣಾಚಾರ್ ಅವರು ಮನವಿ ಮಾಡಿದ್ದಾರೆ.

