
ಹಿರಿಯೂರು:
‘ಧರ್ಮೋ ರಕ್ಷತಿ ರಕ್ಷಿತಃ’ ಎಂಬಂತೆ ಅನಾದಿ ಕಾಲದಿಂದಲೂ ಸನಾತನ ಧರ್ಮ ಜನರನ್ನು ರಕ್ಷಿಸುತ್ತಾ ಬಂದಿದೆ. ಯಾರು ಧರ್ಮವನ್ನು ರಕ್ಷಿಸುತ್ತಾರೆಯೋ ಅವರಿಗೆ ಸದಾ ಶ್ರೀರಕ್ಷೆ ಇರುತ್ತದೆ ಎಂಬುದಾಗಿ ತುಮಕೂರು ರಾಮಕೃಷ್ಣ ಆಶ್ರಮ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸ್ವಾಮೀಜಿ ಅವರು ಹೇಳಿದರು.
ನಗರದ ಶಾರಾದಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಮಿವಿವೇಕಾನಂದ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಊರಿಗೊಂದು ಶಾರದಾಶ್ರಮ ಬರುವುದು ಸಾಮಾನ್ಯವಲ್ಲ. ಅಲ್ಲಿ ಶ್ರೀಮಾತೆ ಎಲ್ಲರನ್ನೂ ರಕ್ಷಿಸುತ್ತಾಳೆ. ಒಂದು ಕುಟುಂಬ ನಿಲ್ಲುವುದು ತಾಯಿಯಿಂದ, ತಾಯಿಯ ತ್ಯಾಗ, ಶಕ್ತಿ, ಶ್ರಮ, ಸಂಯಮ ಕುಟುಂಬಕ್ಕೆ ಶ್ರೀರಕ್ಷೆಯಾಗಿರುತ್ತದೆ. ನಾವು ಸನ್ಯಾಸ ಸ್ವೀಕರಿಸಿ ಎಲ್ಲರ ಒಳಿತಿಗಾಗಿ ಭಗವಂತನ ಸೇವೆ ಮಾಡುತ್ತಿದ್ದೇವೆ ಎಂಬುದಾಗಿ ಅವರು ಹೇಳಿದರು.
ಜಗತ್ತಿನಲ್ಲಿ ಸನ್ಯಾಸತ್ವ ಪರಂಪರೆ ಬಂದಿದ್ದು, ಬುದ್ಧ ಭಗವಾನರು, ಶಂಕರಾಚಾರ್ಯರು, ಸ್ವಾಮಿವಿವೇಕಾನಂದರತಹ ಮಹನೀಯರಿಂದ ಸ್ವಾಮಿ ವಿವೇಕಾನಂದರು ಶ್ರೀ ರಾಮಕರಷ್ಣರಿಂದ ಪ್ರಭಾವಿತರಾಗಿ ಜಗತ್ತಿಗೆ ಆಧ್ಯಾತ್ಮಿಕ ಹಿನ್ನಲೆಯ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದ್ದಾರೆ. ಎಂದರಲ್ಲದೆ,
ರಾಷ್ಟ್ರ ಜಾಗೃತಿಯನ್ನು ತೋರಿಸಿ ಧರ್ಮ ಮತ್ತು ಮಾನವೀಯ ಮೌಲ್ಯಗಳ ಸಂದೇಶ ಸಾರಿದ್ದಾರೆ. ಅಮೇರಿಕ, ಇಂಗ್ಲೆಂಡ್, ಚೀನಾ, ಜಪಾನ್, ಪ್ರಾನ್ಸ್, ಜರ್ಮನಿ ಮುಂತಾದ ದೇಸಗಳನ್ನು ಸುತ್ತಿ ಹಿಂದೂ ಧರ್ಮದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ ಎಂಬುದಾಗಿ ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಮಾತನಾಡಿ ಜಗತ್ತಿನಲ್ಲಿ ಭಗವಂತ ಇರುವುದು ಸತ್ಯ. ಹಣ, ಅಧಿಕಾರ ಇರುವುದು ಶಾಸ್ವತವಲ್ಲ. ಭಗವಂತ ನಮಗೆ ಶಕ್ತಿ ಕೊಟ್ಟಾಗ ನಾವು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಮಾತಾಚೈತನ್ಯಮಯಿ ಅವರು ಶಾರದಾಶ್ರಮದ ಮೂಲಕ ಈ ಭಾಗದ ಜನರನ್ನು ಜಾಗೃತಗೊಳಿಸುತ್ತಿದ್ದಾರೆ ಎಂದರಲ್ಲದೆ,
ಇಲ್ಲಿನ ಪ್ರಾರ್ಥನಾ ಮಂದಿರಕ್ಕೆ ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ. ಈಗಾಗಲೇ ಈ ಯೋಜನೆಗೆ 1.40ಕೋಟಿ ರೂಗಳ ಅಂದಾಜು ವೆಚ್ಚ ತಯಾರಿಸಿದ್ದು, ಅತೀ ಶೀಘ್ರದಲ್ಲಿ ನೂತನ ಪ್ರಾರ್ಥನಾ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತಾ ಚೈತನ್ಯಮಯಿ ಅವರು ಮಾತನಾಡಿ ಪ್ರಾರ್ಥನಾ ಮಂದಿರದ ಭೂಮಿ ಪೂಜೆ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಚಂಡಿಕಾಯಾಗ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಅವರು ಹೇಳಿದರು.ಈ ಸಂದರ್ಭದಲ್ಲಿ ಶಾರಾದಾಶ್ರಮದ ಭಕ್ತಾದಿಗಳು ಹಾಗೂ ನಗರದ ನಾಗರೀಕರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

