
ಹಿರಿಯೂರು:
ಹಿಂದೂಗಳಿಗ ಸಂಕ್ರಾಂತಿ ಹೊಸ ವರ್ಷದ ಆರಂಭ ಮಾತ್ರವಾಗಿಲ್ಲ. ಕಷ್ಟಪಟ್ಟು ಬೆಳೆದ ಧಾನ್ಯವನ್ನು ಕಣದಲ್ಲಿ ರಾಶಿ ಹಾಕಿ ಸಂಭ್ರಮಿಸುವ ಜೊತೆಗೆ ಮನೆಯಲ್ಲಿರುವ ಸಾಕು ಪ್ರಾಣಿಗಳನ್ನು ಪೂಜಿಸುವ ಮೂಲಕ ಸಾಮರಸ್ಯ ಸಾರುವ ವಿಶೇಷ ಹಬ್ಬವಾಗಿದೆ ಎಂಬುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸಿ.ಬಿ.ಪಾಪಣ್ಣ ಅವರು ಹೇಳಿದರು.
ತಾಲ್ಲೂಕಿನ ಬ್ಯಾರಮಡು ಗ್ರಾಮದ ವಾಲ್ಮೀಕಿ ನಗರದ ಶನೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಕ್ರಾತಿ, ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಕಷ್ಟಪಟ್ಟು ಬೆಳೆದ ದಾನ್ಯವನ್ನು ಕಣದಲ್ಲಿ ರಾಶಿ ಹಾಕಿ ಪೂಜಿಸಿ ಸಂಭ್ರಮಿಸುವ ಹಬ್ಬ ಸಂಕ್ರಾತಿ . ಬೆಳೆದ ಧಾನ್ಯದಲ್ಲಿ ಒಂದಿಷ್ಟು ಪಾಲನ್ನು ಕೃಷಿಗೆ ಸಹಾಯ ಮಾಡಿದ ಕೂಲಿಕಾರರ ಕುಟುಂಬಗಳಿಗೆ ಹಂಚುವ ಮೂಲಕ ಸಮಾಜಿಕ ಮೌಲ್ಯದ ಸಂಕೇತವೂ ಆಗಿದೆ ಎಂಬುದಾಗಿ ಅವರು ಹೇಳಿದರು.
ಶನೇಶ್ವರಸ್ವಾಮಿ ದೇವಸ್ಥಾನದ ಮುಖ್ಯಸ್ಥರಾಗಿರುವ ರಾಮಪ್ಪಸ್ವಾಮಿ ಅವರು ಸುತ್ತಮುತ್ತಲ ಗ್ರಾಮಸ್ಥರನ್ನೆಲ್ಲಾ ಒಟ್ಟುಗೂಡಿಸಿ ಮೂರು ದಿನ ಸಂಕ್ರಾಂತಿ ಹಬ್ಬ ಆಚರಿಸುತ್ತಿರುವುದು ಸಂತಸದ ಸಂಗತಿ. ಸಾಂಸ್ಕೃತಿಕ ಪರಂಪರೆಯನ್ನು ಯುವ ಪೀಳಿಗೆಗೆ ಧಾರೆ ಎರೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬುದಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಪ್ಪಸ್ವಾಮಿ ವಹಿಸಿದ್ದರು. ಸಂಗೀತ ಕಲಾವಿದರು ಜಾನಪದ, ಭಾವಗೀತ, ಭಜನೆ ಹಾಡುಗಳು ಮೂಲಕ ರಂಜಿಸಿದರು.
ಈ ಕಾರ್ಯಕ್ರಮದಲ್ಲಿ ನಾಗಭೂಷಣಶಾಸ್ತ್ರಿ, ಚಿತ್ರದುರ್ಗದ ರಂಗೇಗೌಡ, ಹಿಂಡಸಕಟ್ಟೆ ಕರಿಯಪ್ಪ, ಮಾರಪ್ಪ, ಭರಮಗಿರಿಈಶ್ವರಪ್ಪ, ಮೇಗಳಹಟ್ಟಿನಾಗರಾಜ್, ಪಿಲ್ಲಾಜನಹಳ್ಳಿಕೃಷ್ಣಪ್ಪ, ರಾಮಪ್ಪ, ಏಕಾಂತಪ್ಪ ಜಯಣ್ಣ, ಪಾಪಣ್ಣ, ಓ.ಮೂರ್ತಿ, ಶ್ರೀನಿವಾಸಮೂರ್ತಿ, ವೆಂಕಟೇಶ್, ಶಶಿಕುಮಾರ್, ಸಂಗೀತ ಕಲಾವಿದರಾದ ಸುಜಾತ, ರಮೇಶಣ್ಣ, ಪುರುಷೋತ್ತಮ ಉಪಸ್ಥಿತರಿದ್ದರು.
