March 2, 2026
00004

ಹಿರಿಯೂರು:

ವಿಶ್ವದಾದ್ಯಂತ ಮಹಾರಕ್ತದಾನ ಅಭಿಯಾನದ ಮೆಘಾ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು  ನಡೆಸಲಾಗುತ್ತಿದ್ದು, ಈ ಶಿಬಿರದಲ್ಲಿ ಹೆಚ್ಚಿನದಾಗಿ ಯುವಕ-ಯುವತಿಯರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ ಎಂಬುದಾಗಿ ತೇರಪಂಥ್ ಯುವಪರಿಷತ್ ಅಧ್ಯಕ್ಷರಾದ ಗೌರವ್ ಚೋಪ್ರಾ ಅವರು ಹೇಳಿದರು.

ನಗರದ ತೇರಪಂಥ್ ಭವನದಲ್ಲಿ ಶ್ರೀ ಜೈನಶ್ವೇತಾಂಬರ್ ತೇರಪಂಥ್ ಯುವ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಶಿಬಿರದಲ್ಲಿ ಸುಮಾರು 125 ಯೂನಿಟ್ ಗಳ ರಕ್ತ ಸಂಗ್ರಹವಾಗಿದೆ. ಚಳ್ಳಕೆರೆಯ ಬಾಲಾಜಿ ರಕ್ತ ನಿಧಿ ಕೇಂದ್ರದ ವತಿಯಿಂದ ಟೆಕ್ನಿಕಲ್ ಸೂಪರ್ ವೈಸರ್ ತಿಮ್ಮಪ್ಪ ಮತ್ತು ಸಿಬ್ಬಂದಿಗಳು  ಆಗಮಿಸಿ ಈ ರಕ್ತದಾನ ಶಿಬಿರ ರಕ್ತದಾನಿಗಳ ರಕ್ತವನ್ನು ಸ್ವೀಕರಿಸಿರುತ್ತಾರೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ತೇರ್ ಪಂಥ್ ಯುವ ಪರಿಷತ್ ಅಧ್ಯಕ್ಷರಾದ ಗೌರವ್ ಚೋಪ್ರಾ, ಜೀನೇಶ್ ಉಕಡ್, ಜಯಂತಿಲಾಲ್ ಜೊನಾ,  ದೇವರಾಜ್ ಚೋಪ್ರಾ, ಧರ್ಮಪ್ರಕಾಶ್, ಮಹಾವೀರ್, ವಿಕಾಸ್ ಜೈನ್, ರಿಷಬ್, ದಿಲೀಪ್, ಸಂದೀಪ್, ಸಂಜನ್, ಪ್ರಮೋದ್ ಹಾಗೂ ಮಹಿಳಾ ಮಂಡಳಿ ವತಿಯಿಂದ ಪದಾಧಿಕಾರಿಗಳು, ಸ್ವಯಂಪ್ರೇರಿತ ಯುವಕ-ಯುವತಿಯರ ತಂಡ ಸೇರಿದಂತೆ ರಕ್ತದಾನಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *