March 3, 2026
00001

ಹಿರಿಯೂರು:

ವಿದ್ಯಾರ್ಥಿಗಳು ಹೋವರ್ಕ್ ಬದಲು ಹಾರ್ಡ್ ವರ್ಕ್ ಮಾಡಬೇಕು.  ಹಳ್ಳಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಪರಿಶ್ರಮಪಟ್ಟರೆ ಯಶಸ್ಸು ಸಾಧ್ಯ ಎಂಬುದಾಗಿ ಸಂಸದರಾದ  ಬಸವರಾಜ ಬೊಮ್ಮಾಯಿ  ಅವರು ಹೇಳಿದರ.

ತಾಲ್ಲೂಕಿನ ಗೊಲ್ಲಹಳ್ಳಿಯ ಜೆಟ್  ಸಿ.ಬಿ.ಎಸ್.ಇ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ  ಸಂಕ್ರಾತಿ ಸಂಭ್ರಮ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಸಿ ಅವರು ಹೇಳಿದರು.

ಥೇನ್ ಸಿಂಗ್  ಅವರು ಸುಮಾರು 10 ವರ್ಷ ಇದ್ದಾಗ ಅವರ  ತಾಯಿ  ಹಿಮಾಲಯ  ಪರ್ವತ  ಹತ್ತುತ್ತೀಯಾ ಎಂದು ಕೇಳಿದ್ದರಂತೆ , ಹೌದು ಹತ್ತುತ್ತೇನೆ. ಎಂದಿದ್ದ ಥೇನ್ ಸಿಂಗ್, ಅಂದಿನಿಂದ  ಹಿಮಾಲಯ ಪರ್ವತ ಏರುವ ಕನಸನ್ನು ಕಂಡಿದ್ದಲ್ಲದೆ, ಸತತ ಪರಿಶ್ರಮದಿಂದ  ಜೀವನದಲ್ಲಿ  ಅದನ್ನು ಸಾಧಿಸಿ ತೋರಿಸದ.ಹೀಗೆ  ಮಕ್ಕಳು ತಾವು ಕಾಣುವ ಕನಸನ್ನು  ಪರಿಶ್ರಮದ ಮೂಲಕ ನನಸು ಮಾಡಿಕೊಳ್ಳಬೇಕು. ಎಂದರಲ್ಲದೆ,

ಅತಿ ವೇಗವಾಗಿ ಹೋಗುವ  ವಾಹನಕ್ಕೆ  ಜೆಟ್ ಎಂದು ಕರೆಯುತ್ತಾರೆ. ನೀವು ಓದುತ್ತಿರುವ  ಶಾಲೆಯ ಹೆಸರು ಜೆಟ್. ನಿಮ್ಮ ಬೆಳವಣಿಗೆ  ಸಹ ವಿಭಿನ್ನವಾಗಿದೆ. ಹಂಸವು  ಸರಸ್ವತಿಯ ವಾಹನ ,  ಅಂತೆಯೇ ನಿಮ್ಮ ಬದುಕಿಗೆ  ಜೆಟ್ ಹಂಸವಿದ್ದಂತೆ ಎಂಬುದಾಗಿ ಅವರು ಹೇಳಿದರು.

 ಜೆಟ್ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಹಣ್ಣು-ತರಕಾರಿಗಳು, ಮನೆಯಲ್ಲಿ ತಯಾರಿಸಿದ  ತಿಂಡಿ-ತಿನಿಸುಗಳು, ಕಾಳುಗಳು ಮಾರಾಟವಾದವು. 500ಕ್ಕೂ ಹೆಚ್ಚು ವದ್ಆರ್ಥಿಗಳು ತಾವು ತಂದ ಪದಾರ್ಥಗಳನ್ನು ಮಾರಾಟ ಮಾಡುವ ಮೂಲಕ ವ್ಯವಹಾರಿಕ ಜ್ಞಾನವನ್ನು ಹಂಚಿಕೊಂಡರು.

ಎರಡು ದಿನಗಳಿಂದ ನಡೆಯುತ್ತಿರುವ  ಸಂಕ್ರಾತಿ ಹಬ್ಬದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ವಿಜ್ಞಾನ, ಸಮಾಜವಿಜ್ಞಾನ, ಗಣಿತ ವಿಷಯಗಳ ವಸ್ತುಪ್ರದರ್ಶನ ಹಾಗೂ ಜಾನಪದ ಮತ್ತು ಜ್ಞಾನದ ಆಧಾರದ ಚಟುವಟಿಕೆಗಳು ನಡೆದವು.

ಈ ಸಂದರ್ಭದಲ್ಲಿ ಶಾಲೆಯಅಧ್ಯಕ್ಷರಾದ ಚಂದ್ರಶೇಖರ ಬೆಳಗೆರೆ, ಕಾರ್ಯದರ್ಶಿ ಎನ್.ಗಿರಿಜಾ, ಮಾಜಿ ಕಾರ್ಯದರ್ಶಿ  ಬಿ.ಎಸ್. ಮಲ್ಲಿಕಾರ್ಜುನ, ಪ್ರಾಂಶುಪಾಲ ಷಣ್ಮುಗ ಸುಂದರಂ ಹಾಗೂ ಸಮಾಜ ಸೇವಕಿ ಶ್ರೀಮತಿ ಶಶಿಕಲಾ ರವಿಶಂಕರ್  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *