
ಹಿರಿಯೂರು:
ನಗರದ ಶ್ರೀ ಬನಶಂಕರಿ ಕಲ್ಯಾಣ ಮಂಟದಲ್ಲಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಗುಡಿಕೈಗಾರಿಕಾ ತರಬೇತಿಯನ್ನು ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ತರಬೇತುದಾರರು ಮಣಿಹಾರ ಹಾಗೂ ಹಪ್ಪಳ ಹೂವಿನ ಹಾರ ಗೊಂಬೆ ಇನ್ನು ಅನೇಕ ಗುಡಿಕೈಗಾರಿಕೆಗಳ ಬಗ್ಗೆ ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ರಾಜ್ಯ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಜಿ.ಎಸ್.ಪುಷ್ಪಲತ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆಯ ಮಾಜಿ ಸದಸ್ಯರಾದ ಶ್ರೀಮತಿ ಸೈದಾಫಿರ್ದೋಸ್ , ಮುಖಂಡರುಗಳಾದ ಪಿ.ಎಸ್.ಸಾದತ್ ಉಲ್ಲಾ, ಸುರ್ಯೋದಯಅಜೀಜ್, ವೇದಿಕೆಯ ಪದಾಧಿಕಾರಿಗಳಾದ ಗೋಪಿ, ಪಾರ್ವತಮ್ಮ, ಉಷಾ, ನೇತ್ರಾವತಿ, ತಿಪ್ಪಮ್ಮ, ಸುಭದ್ರ ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿದ್ದರು.

