March 2, 2026
002

ಹಿರಿಯೂರು:

ಅತಿಯಾದ ಪ್ಲೋರೈಡ್  ಪೂರಿತ ನೀರನ್ನು ಕುಡಿಯುವುದರಿಂದ ರೋಗ-ರುಜುನಗಳು ಬರುತ್ತವೆ.  ಉತ್ತಮವಾದ ಶುದ‍್ದ ನೀರನ್ನು ಕುಡಿಯುವುದರಿಂದ ಆರೋಗ್ಯವನ್ನು  ಕಾಪಾಡಿಕೊಳ್ಳಿ  ಎಂಬುದಾಗಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಡಾ.ರಾಘವೇಂದ್ರ ಅವರು ಹೇಳಿದರು.

ನಗರದ ಕುವೆಂಪು ಶುದ್ಧ ಗಂಗಾ ಘಟಕ ವ್ಯಾಪ್ತಿಯ  ಶಿರಡಿ ಸಾಯಿಬಾಬಾ ಸರ್ಕಾರಿ ಪ್ರೌಢಶಾಲೆಯಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ‍್ದಿ  ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಶುದ್ಧ  ಗಂಗಾಜಲ ಅಭಿಯಾನ  ಕಾರ್ಯಕ್ರಮವನ್ನು  ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಗ್ರಾಮೀಣ ಅಭಿವೃದ‍್ಧಿ ಯೋಜನೆಯಿಂದ ಶುದ್ಧ ಗಂಗಾ ಘಟಕಗಳನ್ನು ಸ್ಥಾಪನೆ ಮಾಡಿ ಜನರಿಗೆ ಶುದ್ಧ  ನೀಡುತ್ತಾ ಬಂದಿದ್ದಾರೆ. ಎಲ್ಲಾ ಮಕ್ಕಳು ಶುದ್ಧ ನೀರನ್ನು ಕುಡಿಯಿರಿ  ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂಬುದಾಗಿ ಅವರು ಹೇಳಿದರು.

 ಶುದ್ಧಾ ಗಂಗಾ ಮೇಲ್ವಿಚಾರಕರಾದ ರಾಘವೇಂದ್ರಅವರು ಮಾತನಾಡಿ  ಶುದ್ಧ ನೀರಿನ ಬಗ್ಗೆ ಡೆಮೋ ಮುಖಾಂತರ ಮಕ್ಕಳಿಗೆ ಮಾಹಿತಿ ನೀಡಿದರು. ಧರ್ಮಸ್ಥಳ ಸಂಸ್ಥೆ ಹಲವಾರು  ಕಾರ್ಯಕ್ರಮಗಳನ್ನು ನೀಡಿ ಜನರು ಸ್ವಾವಲಂಬಿಯಾಗಿ ಬದುಕಲು ಪ್ರೇರಣೆಯನ್ನು ನೀಡಿದ್ದಾರೆ ಎಂಬುದಾಗಿ ಅವರು ಹೇಳಿದರು.

ಶಾಲೆಯ ಮುಖ್ಯೋಪಧ್ಯಾಯರಾದ ಅರವಿಂದ್ ಅವರು ಮಾತನಾಡಿ  ಶುದ್ಧ ನೀರಿನ ಬಗ್ಗೆ ಮಾಹಿತಿ ನೀಡಿದರು ಈ ಕಾರ್ಯಕ್ರಮದಲ್ಲಿ. ಶುದ್ಧಗಂಗಾ ಪ್ರೇರಕರಾದ  ರಂಗಸ್ವಾಮಿ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *