March 2, 2026
003

ಹಿರಿಯೂರು :

ಹಿರಿಯೂರು ತಾಲ್ಲೂಕಿನಲ್ಲಿ ನಿರಂತರವಾಗಿ ಶಿಕ್ಷಣ ಕ್ಷೇತ್ರ ಮತ್ತು ಸಮಾಜಸೇವೆಗೆ  ನೀಡಿದ  ಅಮೂಲ್ಯ ಕೊಡುಗೆಯನ್ನು  ಗುರುತಿಸಿ   ಉತ್ತರ ಪ್ರದೇಶದ   “ಜೀವನ್ ಜಾಗೃತಿ  ಸೇವಾ ಸಂಸ್ಥಾನ್”  (ನೀತಿ ಆಯೋಗ) ಸಂಸ್ಥೆಯು ಎನ್.ಧನಂಜಯರವರಿಗೆ  2026 ನೇ ಸಾಲಿನ ಮಹಾತ್ಮ ಗಾಂಧಿ  ರಾಷ್ಟೀಯ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶ್ರೀಯುತ ಎನ್.ಧನಂಜಯರವರು  ಮೂಲತಃ ಹೊಳಲ್ಕೆರೆ ತಾಲ್ಲೂಕಿನ ತಿರುಮಲಾಪುರ(ಎಮ್ಮೆಹಟ್ಟಿ) ಗ್ರಾಮದವರಾಗಿದ್ದು, ತಮ್ಮ ವಿದ್ಯಾಭ್ಯಾಸ ಮುಗಿದ  ನಂತರ  ನಿರಂತರವಾಗಿ ಹಿರಿಯೂರಿನ ಶಿಕ್ಷಣ ಕ್ಷೇತ್ರದಲ್ಲಿ 2011ರಲ್ಲಿ ಶ್ರೀರಂಗನಾಥ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ಶ್ರೀರಂಗನಾಥ  ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ  ಹಾಗೂ  ಜ್ಞಾನಭಾರತಿ  ಶಿಕ್ಷಣ ಮಹಾವಿದ್ಯಾಲಯದ  ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು, ರಾಷ್ಟೀಯ ಸೇವಾಯೋಜನೆ  ಕಾರ್ಯಕ್ರಮಗಳನ್ನು  ಕ್ರಿಯಾಶೀಲವಾಗಿ  ಸಂಘಟಿಸಿರುತ್ತಾರೆ.

ವಿದ್ಯಾರ್ಥಿಗಳ  ವ್ಯಕ್ತಿತ್ವ  ವಿಕಸನ  ದೃಷ್ಟಿಯಿಂದ  ಹಲವಾರು  ಸಾಮಾಜಿಕ ಸಾಹಿತ್ಯಿಕ, ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ವಿಚಾರ-ಸಂಕಿರಣಗಳನ್ನು ಆಯೋಜಿಸಿ, ತಮ್ಮ ಸ್ಫೂರ್ತಿಯುತ ಉಪನ್ಯಾಸದ  ಮೂಲಕ ವಿಧಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಮತ್ತು ಸೇವಾಮನೋಭಾವಗಳನ್ನು ಬೆಳೆಸುವಲ್ಲಿ  ಯಶಸ್ವಿಯಾಗಿದ್ದಾರೆ.

ಈ 2026 ನೇ ಸಾಲಿನ ಮಹಾತ್ಮ ಗಾಂಧಿ  ರಾಷ್ಟೀಯ ಸೇವಾ ಪ್ರಶಸ್ತಿ ಪಡೆದ ಎನ್.ಧನಂಜಯರವರಿಗೆ ನಗರದ ಅನೇಕ ಸಂಘಸಂಸ್ಥೆಗಳು, ಜನಪರ ಹಾಗೂ ಪ್ರಗತಿಪರ ಸಂಘಟನೆಗಳು, ಅವರ ಅಭಿಮಾನಿ ಬಳಗದ ಸ್ನೇಹಿತರು, ತುಂಬುಹೃದಯದ ಅಭಿನಂದನೆಗಳನ್ನು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *