
ಹಿರಿಯೂರು:
ಶ್ರೀಶಿವಯೋಗಿ ಸಿದ್ದರಾಮೇಶ್ವರರು ಸುಮಾರು 12ನೇ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬರಾಗಿದ್ದಾರೆ, ಸಮಾಜದ ಎಲ್ಲಾ ವರ್ಗದವರ ಏಳೆಗೆಗಾಗಿ ಶ್ರಮಿಸಿದ ಶ್ರೀಶಿವಯೋಗಿ ಸಿದ್ದರಾಮಯ್ಯರವರ ವಚನಗಳು ವ್ಯಕ್ತಿತ್ವದ ಶುದ್ಧೀಕರಣ ಸಾಮಾಜಿಕ ಸಮಾನತೆ ಸ್ತ್ರೀಶಕ್ತಿ ಮತ್ತು ಆಧ್ಯಾತ್ಮಿಕ ಆಳವನ್ನು ಪ್ರತಿಪಾದಿಸುತ್ತವೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಸಿದ್ಧೇಶ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ, ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯತ್ ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಶಿವಯೋಗಿಸಿದ್ಧರಾಮೇಶ್ವರರವರ 854ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ನಂತರ ಅವರು ಮಾತನಾಡಿದರು.
ತಾವು ನಿರ್ವಹಿಸುವ ಕಾಯಕವನ್ನು ಶ್ರದ್ಧೆಯಿಂದ ನಿಭಾಯಿಸಬೇಕು, ಎನ್ನುವ ಸಂದೇಶ ನೀಡಿದ್ದ ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿದ ಶ್ರೀಶಿವಯೋಗಿ ಸಿದ್ದರಾಮೇಶ್ವರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಆದರ್ಶ ಜೀವನ ನಡೆಸಲು ಸಾಧ್ಯ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಆಂಗ್ಲ ಉಪನ್ಯಾಸಕರಾದ ಮಂಜುನಾಥ್ ಅವರು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿಉಪಾಧ್ಯಕ್ಷರಾದ ಶ್ರೀಮತಿ ಮಂಜುಳ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಸಹಾಯಕ ಕೃಷಿ ನಿರ್ದೇಶಕರಾದ ಅಶೋಕ, ದೈಹಿಕ ಶಿಕ್ಷಣಾಧಿಕಾರಿ ರವೀಂದ್ರನಾಯ್ಕ, ಅಕ್ಷರ ದಾಸೋಹ ಅಧಿಕಾರಿಗಳಾದ ಮಹೇಶ್ ರೆಡ್ಡಿ, ನಿವೃತ್ತ ಕಾರ್ಯಪಾಲಕ ಅಭಿಯಂತರರಾದ ಅಂಜಿನಪ್ಪ, ತಾಲ್ಲೂಕು ಪಂಚಾಯತ್ ಶ್ರೀನಿವಾಸ್ ರೆಡ್ಡಿ, ಸಹಾಯಕ ಲೆಕ್ಕಾಧಿಕಾರಿ ಟಿ.ಪಿ.ತಿಪ್ಪೇಸ್ವಾಮಿ, ಅಬಕಾರಿ ನಿರೀಕ್ಷಕರ ಕಚೇರಿ ಸಬ್ ಇನ್ಸ್ ಪೆಕ್ಟರ್ ರಾಜೇಶ್, ಪಿ.ಆರ್.ಇ.ಡಿ.ಇಲಾಖೆಯ ನಾಗರಾಜು, ಪೊಲೀಸ್ ಇಲಾಖೆಯ ಚಂದ್ರನಾಯ್ಕ, ಸರ್ಕಲ್ ಇನ್ಸಪೆಕ್ಟರ್ ಗಳಾದ ಮಹಮ್ಮದ್ ಸಿರಾಜ್, ಆನಂದ್, ಸಿ.ಡಿ.ಪಿ.ಒ ಆರ್. ರಾಘವೇಂದ್ರ, ಮೀನುಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಹನುಮಂತಪ್ಪ ಚಿಕ್ಕೇರಿ, ಆರೋಗ್ಯ ಇಲಾಖೆಯ ಕೆ.ಹೆಚ್.ಗಿರೀಶ್, ಭೋವಿಸಮಾಜದ ಅಧ್ಯಕ್ಷರಾದ ಟಿ.ಚಂದ್ರಶೇಖರ್, ತಾಲ್ಲೂಕು ಭೋವಿ ಸಮಾಜದ ಕಾರ್ಯದರ್ಶಿಗಳಾದ ಭೂತಭೂವಿ, ಮಾಜಿ ತಾಲ್ಲೂಕು ಪಂಚಾಯಿತಿ ಅದ್ಯಕ್ಷರಾದ ಟಿ.ಆರ್.ಗೋಪಾಲ್, ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಟಿ.ಕೃಷ್ಣಮೂರ್ತಿ, ಭೋವಿ ಸಮಾಜದ ಮುಖಂಡರುಗಳಾದ ನಟೇಶ್, ಈಶ್ವರಪ್ಪಹೂವಿಹೊಳೆ, ಹನುಮಂತಪ್ಪಬೆಳಗಟ್ಟ, ಭೋವಿ ಸಮಾಜದ ಯುವಮುಖಂಡರಾದ ಕೆ.ಡಿ.ಹನುಮಂತಪ್ಪ, ಹನುಮಂತಪ್ಪ ಕೆ.ಟಿ., ಭೋವಿ ಸಮಾಜದ ಯುವ ಘಟಕದ ಅಧ್ಯಕ್ಷರಾದ ಸಂತೋಷ ಚಳಮಡು, ಭೋವಿ ಸಮಾಜದ ಕೆ.ಟಿ.ಗಂಗಾಧರ್, ಮಾಜಿ ಗ್ರಾಮಪಂಚಾಯಿತಿ ಸದಸ್ಯರಾದ ಭೂತೇಶ್, ತಾಲ್ಲೂಕು ಭೋವಿ ಸಮಾಜದ ಉಪಾಧ್ಯಕ್ಷರಾದ ಎಳನೀರುವೆಂಕಟೇಶ್, ತಳವಾರಹಟ್ಟಿ ಭೋವಿ ಸಮಾಜದ ಮುಖಂಡರಾದ ಪೂಜಾರ್ ತಿಮ್ಮಯ್ಯ, ತಿಪ್ಪಸ್ವಾಮಿ, ಹನುಮಂತಪ್ಪ, ದಾಸಭೋವಿ ಮೇಟಿಕುರ್ಕೆ, ಭೋವಿ ಸಮಾಜದ ಮುಖಂಡರಾದ ಸಿದ್ದಾಭೋವಿ, ದಲಿತ ಮುಖಂಡರಾದ ತಿಮ್ಮರಾಜು, ಮಾಜಿ ನಗರಸಭೆ ಸದಸ್ಯರಾದ ರಾಜಪ್ಪ, ಭೋವಿ ಸಮಾಜದ ಯುವಮುಖಂಡರಾದ ಮಂಜು ಮಾಸ್ಟರ್, ಯುವ ಮುಖಂಡರಾದ ರಮೇಶ್ ಸೂರಗೊಂಡನಹಳ್ಳಿ, ತಿಮ್ಮಯ್ಯ ಮಾಸ್ಟರ್, ಅಂಜಿನಪ್ಪ, ಎಸ್.ಎನ್.ಮಂಜುನಾಥ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

