
ಹಿರಿಯೂರು:
ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ ಮನರಂಜನೆಗೆ ಮುನ್ನುಡಿ ಬರೆದ ಸಂಕ್ರಾಂತಿ ಹಬ್ಬವನ್ನು ಶಾಲಾ ಮಕ್ಕಳು ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ಆಚರಿಸಿದರು.
ಸಂಕ್ರಾತಿ ಹಬ್ಬದಅಂಗವಾಗಿ ಶಾಲೆಯಲ್ಲಿ ರೈತರು ಬೆಳೆದ ಕಾಳುಗಳನ್ನು ರಾಶಿ ಮಾಡಿ ಪೂಜಿಸಿದ್ದಲ್ಲದೆ, ಎಳ್ಳು, ಬೆಲ್ಲ, ನೆಲಗಡಲೆ, ಹುರಿಗಡಲೆ, ಸಕ್ಕರೆಅಚ್ಚು, ಕೊಬ್ಬರಿ ಬೆರೆಸಿದ ವಿಶೇಷ ಸಿಹಿಯನ್ನು ನೈವೇದ್ಯ ಮಾಡಿ ನಂತರ ತಮ್ಮ ಆತ್ಮೀಯೊಂದಿಗೆ ಹಂಚಿ ಸಂತೋಷ ವ್ಯಕ್ತಪಡಿಸಿದರು.
ಪ್ರೆಸಿಡೆನ್ಸಿ ಶಾಲೆಯ ತಿಮ್ಮಾರೆಡ್ಡಿ ಅವರು ಯಾವುದೇ ಕಾರ್ಯಕ್ರಮ ಮಾಡಿದರೂ ವಿಭಿನ್ನವಾಗಿ ಆಯೋಜನೆ ಮಾಡಲಿದ್ದು, ಇದರ ಅಂಗವಾಗಿ ಸಮಾಜಸೇವಕಿ ಶ್ರೀಮತಿ ಮಾನಸಮಂಜುನಾಥ್ ಅವರೊಟ್ಟಿಗೆ ಮಕ್ಕಳೊಂದಿಗೆ ಸಂವಾದ ಏರ್ಪಡಿಸಿ ಗಮನ ಸೆಳೆದರು.

ಮಕ್ಕಳು ನಾನಾ ರೀತಿಯ ಪ್ರಶ್ನೆಗಳನ್ನು ಅಂದರೆ, ಮಹಿಳಾ ಸಬಲೀಕರಣ ಎಂದರೆ ಏನು, ರಾಜಕಾರಣಕ್ಕೆ ಆಗಮಿಸುವಿರಾ, ಸೇವೆಯಲ್ಲಿ ಪರಮಾತ್ಮನನ್ನು ಕಾಣುವಿರಾ, ಸಂಸ್ಕಾರ, ಸಂಸ್ಕೃತಿ ಕುರಿತು ನಿಮ್ಮಅಭಿಪ್ರಾಯ ಏನು ಎಂಬಿತ್ಯಾದಿ ಪ್ರಶ್ನೆಗಳನ್ನು ಮಕ್ಕಳು ಶ್ರೀಮತಿ ಮಾನಸಮಂಜುನಾಥ್ ಅವರಿಗೆ ಕೇಳುವ ಮೂಲಕ ಪ್ರೌಢಿಮೆ ಮೆರೆದರು.
ಮನವಿ ಸೇವಾ ಸಂಸ್ಥೆಯ ಮುಖ್ಯಸ್ಥೆ ಹಾಗೂ ಸಮಾಜ ಸೇವಕಿ ಶ್ರೀಮತಿ ಮಾನಸಮಂಜುನಾಥ್ ಮಕ್ಕಳ ಪ್ರಶ್ನೆಗಳಿಗೆ ಅಬಲರು, ಬಡವರ ಸೇವೆ ಮಾಡಲು ಆಸಕ್ತಿ ಇದ್ದು, ಅದಕ್ಕಾಗಿ ಸಾರ್ವಜನಿಕರ ಸೇವೆಗೆ ಆಗಮಿಸಿದ್ದೇನೆ ಎಂದರಲ್ಲದೆ,
ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡುವ ಉದ್ದೇಶ ಹೊಂದಿದ್ದು ಇನ್ನು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದರೆ ಅಧಿಕಾರ ಬೇಕಾಗುತ್ತದೆ. ಆ ಅಧಿಕಾರ ಸಿಗುವುದು ರಾಜಕೀಯ ಕ್ಷೇತ್ರದಲ್ಲಿ , ಹಾಗಾಗಿ ರಾಜಕೀಯ ಪ್ರವೇಶ ಮಾಡುವ ಉದ್ದೇಶ ಹೊಂದಿರುವುದಾಗಿ ಅವರು ಹೇಳಿದರು.

ಮಕರಸಂಕ್ರಾತಿ ಸಂಭ್ರಮದ ಅಂಗವಾಗಿ ಮಕ್ಕಳಲ್ಲಿ ಅರಿವು ಮೂಡಿಸಿದ ಶ್ರೀಮತಿ ಮಾನಸಮಂಜುನಾಥ್ ಹಬ್ಬ ಆಚರಣೆಗಳು ನಮಗೆ ಬೇಕಿವೆ. ಸಂಕ್ರಾತಿ ಹಬ್ಬ ಸುಗ್ಗಿಯನ್ನು ಸಂಭ್ರಮಿಸಲು ಆಚರಣೆ ಮಾಡಲಿದ್ದಾರೆ. ಹಳ್ಳಿಯ ಸೊಗಡಿನೊಂದಿಗೆ ಸಂಕ್ರಾತಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದಾರೆ ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮಕ್ಕಳು ವಿನೂತನ ಗೆಟಪ್ ನಿಂದ ವಿಭಿನ್ನವಾಗಿ ಹಾಸ್ಯಮಯವಾಗಿ ಸಂಕ್ರಾತಿ ಹಬ್ಬವನ್ನು ರಂಜಿಸಿದರು.ಈ ಕಾರ್ಯಕ್ರಮದಲ್ಲಿ ಪ್ರೆಸಿಡೆನ್ಸಿ ಶಾಲೆಯ ಕಾರ್ಯದರ್ಶಿಗಳಾದ ಬಿ.ಜಿ.ತಿಮ್ಮಾರೆಡ್ಡಿ(ಗಿರೀಶ್), ಮುಖ್ಯಶಿಕ್ಷಕರಾದ ಕಲಾಂದರ್ ಭಾಷಾ, ಶಿಕ್ಷಕರಾದ ನಂದನ್, ಶ್ರೀಮತಿ ಗೀತಾ, ಷಾಹೀನಾ, ಪೋಷಕರು ಉಪಸ್ಥಿತರಿದ್ದರು.

