

ಹಿರಿಯೂರು:
ದೇವರುಗಳ ವಾಸ್ತುಶಿಲ್ಪಿಯಾದ ವಿಶ್ವಕರ್ಮರು ಜನಿಸಿದ ಸಪ್ಟಂಬರ್ 17ರ ದಿನವನ್ನು ವಿಶ್ವಕರ್ಮ ಜಯಂತಿ ದಿನವಾಗಿ ಆಚರಿಸಲಾಗುತ್ತದೆ, ವಿಶ್ವಕರ್ಮರು ವಾಸ್ತುಶಿಲ್ಪವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಪುರುಷ, ಇವರಿಂದ ಪರಿಚಿತವಾದ ಕಲೆಯನ್ನು ಇಂದು ಕರಕುಶಲಕರ್ಮಿಗಳು, ಇಂಜಿನಿಯರ್ ಗಳು ಮಾದರಿಯಾಗಿಸಿಕೊಳ್ಳಬೇಕು ಎಂಬುದಾಗಿ ಉಪವಿಭಾಗಾಧಿಕಾರಿಗಳಾದ ಮಹಮದ್ ಜಿಲಾನ್ ಖುರೇಷಿ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲ್ಲೂಕು ತಹಶೀಲ್ದಾರರಾದ ಎಂ.ಸಿದ್ದೇಶ್ ಮಾತನಾಡಿ, ಈ ದೇಶಕ್ಕೆ ಯಾವುದೇ ಸಮಾಜ ಏನಾದರೂ ಕೊಡುಗೆ ಕೊಟ್ಟಿದೆಯೆಂದರೆ ಅದು ವಿಶ್ವಕರ್ಮ ಸಮಾಜ ಮಾತ್ರವಾಗಿದೆ. ವಿಶ್ವಕರ್ಮ ಸಮಾಜ ದೇಶಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿದ್ದು, ಪಂಚಕಸಬುಗಳ ಮೂಲಕ ದೇಶದ ಸಂಸ್ಕೃತಿಯನ್ನು ಉಳಿಸಿದ ಸಮಾಜವೆಂದರೆ ವಿಶ್ವಕರ್ಮ ಸಮಾಜವಾಗಿದೆ ಎಂಬುದಾಗಿ ಅವರು ಪ್ರಶಂಸಿದರು.

ಆರಂಭದಲ್ಲಿ ತಾಲ್ಲೂಕು ವಿಶ್ವಕರ್ಮ ಸಮಾಜ ನಿಕಟಪೂರ್ವ ಅಧ್ಯಕ್ಷರಾದ ಸಿ.ನಾರಾಯಣಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಡೀ ದೇಶವೇ ಹೆಮ್ಮೆಪಡುವಂತೆ ಕೊಡುಗೆಗಳನ್ನು ಕೊಟ್ಟಿರುವಂತಹ ವಿಶ್ವಕರ್ಮ ಸಮಾಜ ಈ ದೇಶದಲ್ಲಿ ಸುಮಾರು 7ರಿಂದ 9 ಕೋಟಿ ಜನಸಂಖ್ಯೆ ಹೊಂದಿದ್ದರೂ ಎಲ್ಲಾ ರೀತಿಯಿಂದ ನಿರ್ಲಕ್ಷಕ್ಕೆ ಒಳಪಟ್ಟಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸುವ ಮೂಲಕ ಈ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂಬುದಾಗಿ ಹೇಳಿದರು.
ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ನಗರಸಭೆಅಧ್ಯಕ್ಷರಾದ ಬಾಲಕೃಷ್ಣ, ಹಾಗೂ ಸಮಾಜದ ಮುಖಂಡರುಗಳಾದ ಸಿ.ನಾರಾಯಣಾಚಾರ್, ಪಿ.ಸತ್ಯನಾರಾಯಣಾಚಾರ್, ಎ.ಗೋಪಾಲಾಚಾರ್, ಪ್ರಭಾಕರಾಚಾರ್, ನಾಗರಾಚಾರ್, ಹೆಚ್.ಎಸ್.ನಾಗಾರಾಜಾಚಾರ್ ಶಶಿಧರ, ಅಜಯ್ ರಾಜ್, ಹರೀಶ್, ರಾಘವೇಂದ್ರ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಕೆ.ಪಿ.ಎಸ್.ಹರಿಯಬ್ಬೆಯ ಉಪನ್ಯಾಸಕರಾದ ಪ್ರಸನ್ನ ಕುಮಾರ್, ಪಿ.ಗುರುಮೂರ್ತಿಚಾರಿ, ಬಂಗಾರಿ, ರವಿ, ಷಣ್ಮುಖ, ಮಂಜುನಾಥಾಚಾರ್, ಮಲ್ಲೇಶಾಚಾರ್ ಇವರುಗಳು ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ವಿಶಾಲಾಕ್ಷಮ್ಮ, ಎ.ಎಸ್.ಐ.ಚಂದ್ರಪ್ಪ, ಆರ್.ಬಿ.ರವೀಂದ್ರನಾಯ್ಕ ಟಿ.ಪಿ.ಇ.ಒ ಶಿಕ್ಷಣ ಇಲಾಖೆ, ತೋಟಗಾರಿಕಾ ಇಲಾಖೆಯ ಶ್ರೀನಿವಾಸ, ರೇಷ್ಮೆ ಇಲಾಖೆಯ ಈಶ್ವರಪ್ಪ, ಪಶುಪಾಲನಾ ಇಲಾಖೆ ಸುರೇಶ್, ಪಿ.ಡಬ್ಲ್ಯೂ.ಡಿ. ಇಲಾಖೆ ಆಂಟೋನಿ, ತಾಲ್ಲೂಕು ಕಚೇರಿ ಶ್ರೀನಿವಾಸರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.