
ಹಿರಿಯೂರು :
ಉತ್ತರಾಯಣದ ಪ್ರಾರಂಭ ದಿನವಾದ ಸಂಕ್ರಾಂತಿ ಹಬ್ಬವು ರೈತರ ಸುಗ್ಗಿ ಹಬ್ಬವಾಗಿದ್ದು, ಈ ಹಬ್ಬವು ನಾಡಿನ ಸಮಸ್ತ ಜನತೆಗೆ ಚಳಿಗಾಲದ ಕಹಿಯನ್ನು ಕಳೆದು, ಹೊಸ ಚೈತನ್ಯ ತರುವ ಹಬ್ಬವಾಗಲಿ, ಎಲ್ಲರ ಜೀವನದಲ್ಲಿನ ಸಂಕಷ್ಟ ದೂರವಾಗಿ ಸಂತಸ-ಸಂಭ್ರಮ ತರುವಂತಾಗಲಿ, ಹೊಸವರ್ಷದ ಮೊದಲ ಹಬ್ಬವಾದ ಮಕರಸಂಕ್ರಾಂತಿ ಎಲ್ಲರ ಬದುಕಿನಲ್ಲಿ ಎಳ್ಳು-ಬೆಲ್ಲದ ಸಿಹಿಯನ್ನು ನೀಡಲಿ ಎಂಬುದಾಗಿ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ಹಾಗೂ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಆಲೂರು ಹನುಮಂತರಾಯಪ್ಪರವರು ಶುಭಹಾರೈಸಿದ್ದಾರೆ.
ಸಂಕ್ರಾಂತಿ ಹಬ್ಬವು ನಮ್ಮ ಆತ್ಮೀಯ ಗೆಳೆಯರಿಗೆ, ಸಮಸ್ತ ಫೇಸ್ ಬುಕ್ ಗೆಳೆಯ-ಗೆಳತಿಯರಿಗೆ, ಸನ್ಮಂಗಳವನ್ನು ಉಂಟು ಮಾಡಲಿ ಎಂಬುದಾಗಿ “ಹಿರಿಯೂರುನ್ಯೂಸ್” ನ್ಯೂಸ್ ತಂಡದ ವತಿಯಿಂದ ಹಿರಿಯ ಪತ್ರಕರ್ತರಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆ ರಂಗನಾಥ್, ಶ್ರೀಪಾದ್ ವಸಿಷ್ಠ, ಪರಮೇಶ್ವರಪ್ಪ, ಉಮೇಶ್ ಯಾದವ್, ಶಿವರಾಜ್ ನಾಯಕ್, ಇರ್ಫಾನ್ ವುಲ್ಲಾ, ಇದಾಯತ್ ವುಲ್ಲಾ, ಇವರುಗಳು ಶುಭಹಾರೈಸಿದ್ದಾರೆ.
