
ಹಿರಿಯೂರು:
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಬಿ-ಜಿರಾಮ್ ಜಿ ಯೋಜನೆ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದ್ದು, ದೇಶದ ಜನತೆ ಕಾಂಗ್ರೆಸ್ ಪಕ್ಷದ ಅಪಪ್ರಚಾರಕ್ಕೆ ಅನುವು ಕಿವಿಗೊಡಬಾರದು ಎಂಬುದಾಗಿ ಬಿ.ಜೆ.ಪಿ. ತಾಲ್ಲೂಕು ಮಂಡಲಅಧ್ಯಕ್ಷರಾದ ಕೆ.ಅಭಿನಂದನ್ ಅವರು ಮನವಿ ಮಾಡಿದ್ದಾರೆ.
ವಿಬಿ-ಜಿ ರಾಮ್ ಜಿ ಯೋಜನೆಯಡಿ ಉದ್ಯೋಗದ ದಿನಗಳನ್ನು 100ರಿಂದ125 ದಿನಗಳಿಗೆ ಹೆಚ್ಚಿಸಲಾಗಿದೆ. ಹೀಗಾಗಿ, ರೈತರು ಮತ್ತು ಕೃಷಿ ಕಾರ್ಮಿಕರು ಇಬ್ಬರೂ ಸಮಾನವಾಗಿ ಪ್ರಯೋಜನ ಪಡೆಯುವಂತಾಗಿದೆ.
ಯೋಜನೆಯ ಉದ್ದೇಶ ಯಾವುದೇ ಅವ್ಯವಸ್ಥೆ ಸೃಷ್ಟಿಸುವುದಿಲ್ಲ. ಬದಲಾಗಿ ಪಾರದರ್ಶಕತೆ , ಹೆಚ್ಚು ಉದ್ಯೋಗವಕಾಶ ಹಾಗೂ ಸಕಾಲಿಕ ವೇತನ ಪಾವತಿಯನ್ನು ಖಚಿತಪಡಿಸುವುದಾಗಿದೆ. ಕೇಂದ್ರದ ಜನಪರ ಯೋಜನೆಯನ್ನು ಸಹಿಸದ ರಾಜ್ಯ ಕಾಂಗ್ರೆಸ್ ತನ್ನ ಆಡಳಿತದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅಪಪ್ರಚಾರದಲ್ಲಿ ತೊಡಗಿದೆ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೇತೃತ್ವದ ಯು.ಪಿ.ಎ.ಸರ್ಕಾರ ಮನರೇಗಾ ಯೋಜನೆಗೆ 2013-14ರಲ್ಲಿ ಕೇವಲ 33ಸಾವಿರ ಕೋಟಿ ಅನುದಾನ ನೀಡಿದ್ದರೆ, ಮೋದಿ ಸರ್ಕಾರವು ವಿಬಿ-ಜಿರಾಮ್ ಜಿ. ಯೋಜನೆಗೆ 2.86ಲಕ್ಷ ಕೋಟಿ ಮೀಸಲಿಟ್ಟಿದೆ.ಎಂದರಲ್ಲದೆ,
2014ರಲ್ಲಿ 1.66 ಕೋಟಿ ಇದ್ದ ಕೆಲಸದ ದಿನಗಳನ್ನು 3.10 ಕೋಟಿ ದಿನಗಳಿಗೆ ಹೆಚ್ಚಿಸಿದೆ. ಯಾರಿಂದ ಯೋಜನೆ ಸಮಾಧಿಯಾಗಿದೆಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟಪಡಿಸಬೇಕು ಎಂಬುದಾಗಿ ಅವರು ಸವಾಲು ಹಾಕಿದ್ದಾರೆ.
