
ಹಿರಿಯೂರು :
ಕುಂಚಿಟಿಗ ಬುದ್ಧಿಜೀವಿಗಳು, ಉಳ್ಳವರು ಸಮಾಜದ ಅಭಿವೃದ್ಧಿಗೆ ಕೈಜೋಡಿಸುತ್ತಿಲ್ಲ. ತಮ್ಮ ತಮ್ಮ ರಾಜಕಾರಣ ವ್ಯವಹಾರ, ಕೃಷಿ, ವೃತ್ತಿ, ಕುಟುಂಬದ ಅಭಿವೃದ್ಧಿಗೆ ಮಾತ್ರ ಸಮಾಜವನ್ನು ಬಳಸಿಕೊಳ್ಳುತ್ತಾರೆ ಎಂಬುದಾಗಿ ಸಾಮಾಜಿಕ ಹೋರಾಟಗಾರ ಕಸವನಹಳ್ಳಿ ರಮೇಶ್ ಆಪಾದಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ಕುಂಚಿಟಿಗ ಜನಾಂಗದ ಮುಖಂಡರನ್ನು ಉದ್ದೇಶಿಸಿ, ನಂತರ ಅವರು ಮಾತನಾಡಿದರು.
ಸಮಾಜದ ಹಿಂದುಳಿದವರ ಬಗ್ಗೆ ತಿರಸ್ಕಾರ ಭಾವದಿಂದ ನೋಡುತ್ತಾರೆ. ಇವರನ್ನು ಮಾತನಾಡಿಸಿದರೆ ಎಲ್ಲಿ ಸಹಾಯ ಕೇಳುತ್ತಾರೋ ಎಂದು ದೂರ ಇಡುತ್ತಾರೆ ಚುನಾವಣೆ ಬಂದಾಗ ಮಾತ್ರ ನಾವು ನಮ್ಮವರು ಒಗ್ಗಟ್ಟಾಗಿರಬೇಕು ಎಂದು ಭಾವಾನಾತ್ಮಕವಾಗಿ ಹೇಳುತ್ತಾ ಬ್ಲಾಕ್ ಮೇಲ್ ಮಾಡುತ್ತಾರೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷರಾದ ಮೈಸೂರುಶಿವಣ್ಣನವರು ಮಾತನಾಡಿ, ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ, ಸಂಸ್ಕಾರ, ಮೌಲ್ಯ, ಇಂತಹ ದೂರ ದೃಷ್ಟಿಯ ಕಾರಣಕ್ಕಾಗಿ ತಮಿಳುನಾಡು ಕುಂಚಿಟಿಗರು ಕರ್ನಾಟಕಕ್ಕೂ ನಾವುಗಳು ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೂ ಕುಂಚಿಟಿಗ ಕುಲದೇವ ಆಶೀರ್ವಾದ ಮತ್ತು ಸಮಾಜ ಬಾಂಧವರ ಜೊತೆ ಸಮ್ಮಿಲನಕ್ಕಾಗಿ ಫೆಬ್ರವರಿ ತಿಂಗಳಲ್ಲಿ ಪ್ರವಾಸ ಹೋಗಲಿದ್ದೇವೆ ಎಂಬುದಾಗಿ ಹೇಳಿದರು.
ಪ್ರಧಾನ ಕಾರ್ಯದರ್ಶಿ ಕೆ.ಜಿ.ಹನುಮಂತರಾಯ ಮಾತನಾಡಿ, ತಾಲೂಕು ಹರಿಯಬ್ಬೆ ಗ್ರಾಮಕ್ಕೆ 180 ಜನ ತಮಿಳುನಾಡು ಕುಂಚಿಟಿಗರು ಆಗಮಿಸಲಿದ್ದು ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಕುಂಚಿಟಿಗ ಕುಲಬಾಂಧವರಿಗೆ ಉಟೋಪಚಾರಗಳನ್ನು ಜಿಲ್ಲಾ ಕುಂಚಿಟಿಗ ಸಂಘದ ಕಾರ್ಯದರ್ಶಿ ಹರಿಯಬ್ಬೆ ಹೆಂಜೆರಪ್ಪ ವಹಿಸುವರು ಎಂದು ತಿಳಿಸಿದರು.

ಈ ಸಭೆಯಲ್ಲಿ ಕುಂಚಿಟಿಗ ಸಮಾಜದ ಕಾರ್ಯದರ್ಶಿ ದಿಂಡಾವರಚಂದ್ರಗಿರಿ, ಖಜಾಂಚಿ ಕಾತ್ರಿಕೇನಹಳ್ಳಿ ಮಂಜುನಾಥ್, ಉಪಾಧ್ಯಕ್ಷ ಶ್ರೀಮತಿ ಭಾರತಿ, ಗ್ರಾಮ ಪಂಚಾಯಿತಿ ಸದಸ್ಯೆ ಕುಮಾರಿ ಶಶಿಕಲಾ, ಕ್ಯಾಲೆಂಡರ್ ಸಮಿತಿ ಅಧ್ಯಕ್ಷ , ಗುಡಿ ಗೌಡ್ ಚಿಲ್ಲಹಳ್ಳಿ ನಿಜಲಿಂಗಪ್ಪ, ರೈತ ಸಂಘದ ಯುವಘಟಕದ ಅದ್ಯಕ್ಷ ಯಳನಾಡುಚೇತನ್, ಗೌರವಾಧ್ಯಕ್ಷ ಗಡಾರಿ ಕೃಷ್ಣಪ್ಪ, ಜಿಲ್ಲಾ ಸಮಿತಿ ಪದಾಧಿಕಾರಿ ದೇವರಾಜ್ ಮೇಷ್ಟ್ರು, ಸೇರಿದಂತೆ ಇತರರು ಉಪಸ್ಥಿತರಿದ್ದರು.
