March 2, 2026
005

ಹಿರಿಯೂರು:

ಕನ್ನಡ ನಾಡಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಗರದ  ಶ್ರೀತೇರುಮಲ್ಲೇಶ್ವರಸ್ವಾಮಿಯ ಜಾತ್ರಾಮಹೋತ್ಸವದ ಕಾರ್ಯಕ್ರಮಗಳು ಜನವರಿ 24ರ ಶನಿವಾರ ಕಂಕಣೋತ್ಸವದೊಂದಿಗೆ  ಪ್ರಾರಂಭಗೊಂಡು ಫೆಬ್ರವರಿ 7ರ ಶನಿವಾರದವರೆಗೆ  ಕಂಕಣವಿಸರ್ಜನೆಯೊಂದಿಗೆ ಮುಕ್ತಾಯಗೊಳಿಸಲಾಗುವುದು ಎಂಬುದಾಗಿ ದೇವಸ್ಥಾನ ಆಡಳಿತ ಮಂಡಳಿಯು ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

ಇದೇ ಜನವರಿ 24ರ ಶನಿವಾರ  ರಾತ್ರಿ 8ಕ್ಕೆ ಕಂಕಣ ಕಲ್ಯಾಣೋತ್ಸವ, 25ರ ಭಾನುವಾರ ರಾತ್ರಿ 8ಕ್ಕೆ  ಗಿಳಿವಾಹನೋತ್ಸವ, 26ರ ಸೋಮವಾರ ರಾತ್ರಿ 8ಕ್ಕೆ ಗಂಡುಭೇರುಂಡ ವಾಹನೋತ್ಸವ, 27ರ ಮಂಗಳವಾರ ರಾತ್ರಿ 8ಕ್ಕೆ ನವಿಲು ವಾಹನೋತ್ಸವ, 28ರ ಬುಧವಾರ ರಾತ್ರಿ 8ಕ್ಕೆ ಸಿಂಹವಾಹನೋತ್ಸವ, ಜನವರಿ29ರ ಗುರುವಾರ ರಾತ್ರಿ 8ಕ್ಕೆ ನಂದಿವಾಹನೋತ್ಸವ,  ಜನವರಿ 30ರ ಶುಕ್ರವಾರ ರಾತ್ರಿ 8ಕ್ಕೆ ಸರ್ಪವಾಹನೋತ್ಸವ, 31ರ ಶನಿವಾರ ರಾತ್ರಿ 8ಕ್ಕೆ ಅಶ್ವವಾಹನೋತ್ಸವ, ಫೆಬ್ರವರಿ 1ರ ಭಾನುವಾರ ಗಜವಾಹನೋತ್ಸವ, 2ರ ಸೋಮವಾರ  ಬೆಳಿಗ್ಗೆಯಿಂದ ರಾತ್ರಿಯವರೆಗೆ ಬಸವ ವಾಹನೋತ್ಸವ ಹಾಗೂ ಅಕ್ಕಿತಂಬಿಟ್ಟಿನ ಆರತಿ ನಡೆಯುವುದು.

ತಾಲ್ಲೂಕಿನ ಐಮಂಗಲ ಹೋಬಳಿ ಬೀರೇನಹಳ್ಳಿ ಮಜುರೆ ಕರಿಯಣ್ಣಹಟ್ಟಿ ಗ್ರಾಮದ ಶ್ರೀವೀರಕರಿಯಣ್ಣ ದೇವರ  ನೇತೃತ್ವದಲ್ಲಿ ಮಾಘ ಶುದ್ಧ ಪಾಡ್ಯಮಿ ಫೆಬ್ರವರಿ 3ರ ಮಂಗಳವಾರ ಬೆಳಿಗ್ಗೆ 10ಗಂಟೆಗೆ  ಶಿವಧನಸ್ಸಿನ ಗಂಗಾ ಸ್ನಾನದಉತ್ಸವ ಮಧ್ಯಾಹ್ನ 12 ಗಂಟೆಗೆ ಮಘಾ ನಕ್ಷತ್ರದಲ್ಲಿ ಶ್ರೀತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ.

ಮಧ್ಯಾಹ್ನ1.30ಕ್ಕೆ ಪ್ರಸಾದ ವಿನಿಯೋಗ ಮತ್ತು ಸಂಜೆ 5ಕ್ಕೆ ಶ್ರೀಚಂದ್ರಮೌಳೇಶ್ವರ, ಶ್ರೀಉಮಾಮಹೇಶ್ವರ ರಥೋತ್ಸವ ಫೆಬ್ರವರಿ 4ರ ಬುಧವಾರ ಮಧ್ಯಾಹ್ನ 2 ಗಂಟೆಗೆ ನಗರದ ಸಿದ್ಧನಾಯಕ ವೃತ್ತದಲ್ಲಿ ಶ್ರೀಮದಕರಿ ಯುವಕ ಸಂಘದ ವತಿಯಿಂದ ಜಂಗೀ ಕುಸ್ತಿಯನ್ನು ಏರ್ಪಡಿಸಲಾಗಿದೆ.

ಫೆಬ್ರವರಿ 5ರ ಗುರುವಾರ ರಾತ್ರಿ 8ಕ್ಕೆ ಸುಮಂಗಲೆಯರಿಂದ ಕರ್ಪೂರದಾರತಿ, ಫೆಬ್ರವರಿ 6ರ ಶುಕ್ರವಾರ ರಾತ್ರಿ 8ಕ್ಕೆ ಶ್ರೀಚಿಟುಗಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ ಸಂದರ್ಶನವು ಹಾಗೂ  ಉಯ್ಯಾಲೋತ್ಸವ, ವಸಂತೋತ್ಸವ, ಓಕಳಿ ಪಾರ್ವತೋತ್ಸವ, ಫೆಬ್ರವರಿ 7ರ ಶನಿವಾರ ಸಂಜೆ 4ಕ್ಕೆ ಕಂಕಣ ವಿಸರ್ಜನೆ ನಡೆಸಲಾಗುವುದು.

ಸತತ 15 ದಿನಗಳ ಕಾಲ ನಡೆಯುವ ಶ್ರೀತೇರುಮಲ್ಲೇಶ್ವರಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ತನು, ಮನ, ಧನ, ಧಾನ್ಯ ರೂಪದಲ್ಲಿ ಸಹಕರಿಸುವುದರ ಜೊತೆಗೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *