
ಹಿರಿಯೂರು:
ಸ್ವಾಮಿವಿವೇಕಾನಂದರು ಭಾರತದ ಆದ್ಯಾತ್ಮಿಕ ಚಿಂತನೆ ಹಾಗೂ ಸಂಸ್ಕೃತಿಯನ್ನು ಜಗತ್ತಿಗೆ ಸಾರುವ ಮೂಲಕ ವಿಶ್ವದ ಆಧ್ಯಾತ್ಮಿಕ ಗುರು ಆಗಿದ್ದಾರೆ. ಸ್ವಾಮಿವಿವೇಕಾನಂದರು ತಮ್ಮ 39 ವರ್ಷಗಳ ಜೀವಿತಾವಧಿಯಲ್ಲಿ ಅದ್ಭುತವಾದ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದರು ಎಂಬುದಾಗಿ ಇನ್ನರ್ ವೀಲ್ಹ್ ಕ್ಲಬ್ ಅಧ್ಯಕ್ಷೆಯಾದ ರೋಹಿಣಿಮಹೇಶ್ ಅವರು ಹೇಳಿದರು.
ನಗರದ ಸರ್ಕಾರಿ ಬಸ್ ನಿಲ್ದಾಣದ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಮಿವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶ್ವಕ್ಕೆ ತಮ್ಮ ಸಂದೇಶಗಳನ್ನು ನೀಡಿ ಯುವಶಕ್ತಿಯನ್ನು ಜಾಗೃತಗೊಳಿಸಿದ್ದಾರೆ. ಭಾರತೀಯರಲ್ಲಿ ದೇಶಾಭಿಮಾನದ ಕಿಚ್ಚನ್ನು ಬೆಳೆಸಿದ ಮಹಾನ್ ಚೇತನ. ಮಕ್ಕಳು ಸ್ವಾಮಿವಿವೇಕಾನಂದ ಪುಸ್ತಕ ಓದುವ ಮೂಲಕ ಒಳ್ಳೆಯ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು. ಎಂಬುದಾಗಿ ಅವರು ಹೇಳಿದರು.

ಶಾಲೆಯ ಅಭಿವೃದ್ಧಿಗೆ ನವತೇಜ ಫಿಲ್ಲಿಂಗ್ ಸೆಂಟರ್ ವತಿಯಿಂದ ರೋಹಿಣಿ ಮಹೇಶ್ 10ಸಾವಿರ ರೂ.ದೇಣಿಗೆ ನೀಡಿದರು ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಪುಸ್ತಕಗಳನ್ನು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ಹ್ ಕ್ಲಬ್ ಕಾರ್ಯದರ್ಶಿ ಸರ್ವಮಂಗಳಾರಮೇಶ್, ಇಂಪಾರಿತೇಶ್, ಪದ್ಮಾಮಂಜೇಶ್, ಪದ್ಮಾ ಆನಂದ್, ಶಾಲೆಯ ಮುಖ್ಯೋಪಧ್ಯಾಯರಾದ ಅನುಸೂಯಮ್ಮ, ಚರಣ್ ರಾಜ್ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

