
ಹಿರಿಯೂರು : ಪೋಲೀಸ್ ಪ್ರಕಟಣೆ:13ನೇ ಜನವರಿ:
ನಗರದ ಮಟನ್ ಮಾರ್ಕೆಟ್ ಬಳಿ ಇರುವ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕಡಪಕಲ್ಲು ಮತ್ತು ಬೊಂಬಿನ ವ್ಯಾಪಾರ ಮಾಡುತ್ತಿದ್ದ ಸ್ವಾಮಿ, ತಂದೆ ಸತ್ಯನಾರಾಯಣ ಎಂಬುವವರು 2024ರ ಮಾರ್ಚ್ 6ರಂದು ಮದ್ಯಾಹ್ನ 12 ಗಂಟೆಗೆ ಕೆಲಸದ ನಿಮಿತ್ತ ಊರಿಗೆ ಹೋಗುತ್ತೇನೆ ಎಂದು ಹೋದವರು ಮತ್ತೆ ವಾಪಸ್ ಮನೆಗೆ ಬಂದಿರುವುದಿಲ್ಲ, ಪೋನ್ ಸ್ವಿಚ್ ಆಫ್ ಆಗಿತ್ತು, ಇಷ್ಟು ದಿನ ಎಲ್ಲಾ ಕಡೆಯಲ್ಲಿ ಹುಡುಕಿ ಸಿಗದಿದ್ದ ಕಾರಣ ತಡವಾಗಿ ದೂರು ನೀಡುತ್ತಿದ್ದೇನೆ ಎಂಬುದಾಗಿ ಅವರ ಪತ್ನಿ ನೇತ್ರಾವತಿ ನೀಡಿದ ದೂರಿನ ಮೇಲೆ ನಗರದ ಪೋಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಸುಮಾರು 32 ವರ್ಷದ ಸ್ವಾಮಿ ಎಂಬುವವರು ಮೇದಾರ ಜನಾಂಗಕ್ಕೆ ಸೇರಿದವರಾಗಿದ್ದು, 6ಅಡಿ ಎತ್ತರ, ದೃಢಕಾಯ ಮೈಕಟ್ಟು, ದುಂಡು ಮುಖ, ಬಲಗೈ ಮೇಲೆ ಅಪ್ಪ-ಅಮ್ಮ ಎಂದು ಮತ್ತು ಭುಜದ ಮೇಲೆ ಡಮರುಗದ ಹಚ್ಚೆ ಹಾಕಿಸಿಕೊಂಡಿದ್ದು, ಕನ್ನಡ, ತೆಲುಗು, ತಮಿಳು ಮಾತನಾಡಬಲ್ಲರಾಗಿದ್ದಾರೆ, ಮನೆಯಿಂದ ಹೋಗುವಾಗ ಹಸಿರುಬಣ್ಣದ ಹೂವಿನ ಶರ್ಟ್, ತಿಳಿ ನೀಲಿ ಬಣ್ಣದ ಪ್ಯಾಂಟ್ ಹಾಕಿಕೊಂಡಿದ್ದು, ಕೆ.ಎ.16 ಇಜೆ 0052 ನಂಬರ್ ನ ಮೋಟಾರ್ ಸೈಕಲ್ ನಲ್ಲಿ ಹೋಗಿರುತ್ತಾರೆ. ಅವರ ಪೋನ್ ನಂಬರ್ 9740607691 ಮತ್ತು 8105676333 ಆಗಿರುತ್ತದೆ.
ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೇ ಪೋಲೀಸ್ ಇಲಾಖೆಯ ಹಿರಿಯೂರು ಗ್ರಾಮಾಂತರ ಠಾಣೆ 08193-263444, ಹಿರಿಯೂರು ಗ್ರಾಮಾಂತರ ಠಾಣೆ ಪಿ.ಎಸ್.ಐ 9480803177, ಡಿ.ವೈ.ಎಸ್.ಪಿ ಕಚೇರಿ 08193-263499, ಜಿಲ್ಲಾ ನಿಸ್ತಂತು ಕೇಂದ್ರ 08194-222782 ಇವರುಗಳಿಗೆ ಮಾಹಿತಿ ನೀಡುವಂತೆ ಪೋಲೀಸ್ ಇಲಾಖೆ ವತಿಯಿಂದ ನಗರ ಪೋಲೀಸ್ ಠಾಣೆಯ ಪೋಲೀಸ್ ಉಪನಿರೀಕ್ಷಕರಾದ ಶ್ರೀಮತಿ ಶಶಿಕಲಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
