
ಹಿರಿಯೂರು :
ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಇಂದಿನ ಯುವಪೀಳಿಗೆ ಸಮಾಜದ ಉತ್ತಮ ಪ್ರಜೆಗಳಾಗಬೇಕಾದರೆ ಸ್ವಾಮಿ ವಿವೇಕಾನಂದರ ಆದರ್ಶ ಜೀವನನಲ್ಲಿ ಅಳವಡಿಸಿಕೊಳಬೇಕಾಗಿದೆ ಎಂಬುದಾಗಿ ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಹೆಚ್.ಎಸ್.ಮಾರುತೇಶಕೂನಿಕೆರೆ ಹೇಳಿದರು.
ತಾಲ್ಲೂಕು ಅಭಿಮತ ವಾರಪತ್ರಿಕೆ ಕಚೇರಿಯಲ್ಲಿ ಮಾನವ ಬಂಧುತ್ವ ವೇದಿಕೆಯ ವತಿಯಿಂದ ಸ್ವಾಮಿವಿವೇಕಾನಂದರ ಜಯಂತಿ ಕಾರ್ಯಕ್ರಮ ನೆರವೇರಿಸಲಾಯಿತು,,
ಈ ದೇಶವನ್ನು ಕಟ್ಟಿಬೆಳೆಸಬೇಕಿರುವ ಯುವಜನತೆ ಮದ್ಯಪಾನ, ಗಾಂಜಾ, ಡ್ರಕ್ಸ್ ಕುಡಿತದ ಮತ್ತಿನಲ್ಲಿ ಕಾಲ ಕಳೆಯುತ್ತಾ ಬದುಕಿನ ಸಮಯವನ್ನು ವ್ಯರ್ಥಮಾಡಿಕೊಳ್ಳುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಯುವಜನತೆ ಎಚ್ಚೆತ್ತುಕೊಳ್ಳದಿದ್ದರೆ ದೇಶದ ಭವಿಷ್ಯವೇ ತುಂಬಾ ಕಷ್ಟಕರವಾಗಿರುತ್ತದೆ ಹಾಗಾಗಿ ಯುವಕರು ಸ್ವಾಮಿ ವಿವೇಕಾನಂದರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಹೆಗ್ಗೆರೆ ಮಂಜುನಾಥ್, ಕದುರಪ್ಪ ಶಿಡ್ಲಯಯ ಕೊಟ್ಟೆ, ಸುರಗೊಂಡನಹಳ್ಳಿ ಲಿಂಗರಾಜ್, ದಾದಾಪೀರ್ ಘಾಟ್, ಜಮೀರ್ ಸುರಗೊಂಡನಹಳ್ಳಿ, ರಂಗನಾಥ್ ಹಿಂಡಸಕಟ್ಟೆ, ಲಕ್ಕಣ್ಣ ಹಿಂಡ ಸಕಟ್ಟೆ, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
