March 2, 2026
000005

ಹಿರಿಯೂರು:

ನಗರ ವ್ಯಾಪ್ತಿಯ ಕೇಂದ್ರ ಬಿಂದುವಾದ ಗಾಂಧಿ ವೃತ್ತದಲ್ಲಿರುವ ತಳ್ಳುವ ಗಾಡಿಗಳನ್ನು ಸ್ಥಳಾಂತರಿಸಿ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರಲ್ಲಿ ನಗರದ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು ಎಂಬುದಾಗಿ ನಗರಸಭೆಯ ಪೌರಾಯುಕ್ತರಾದ ಎ.ವಾಸೀಂರವರು ಹೇಳಿದರು.

ನಗರದ  ನಗರಸಭೆ ವತಿಯಿಂದ ಸ್ವಚ್ಛತೆ ಇ-ಸೇವಾಯಡಿಯಲ್ಲಿ ನಮ್ಮ ಚಿತ್ತ ಸ್ವಚ್ಛತೆಯತ್ತ ಕಾರ್ಯಕ್ರಮದಡಿ ನಗರ ವ್ಯಾಪ್ತಿಯ ಕೇಂದ್ರ ಬಿಂದುವಾದ ಗಾಂಧಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗಾಂಧಿ ವೃತ್ತದಲ್ಲಿಮುಖ್ಯವಾಗಿ ಅಪಘಾತಗಳು ಸಂಭವಿಸುವ ಮುಂಜಾಗ್ರತೆ ಕ್ರಮವಾಗಿ ತಳ್ಳುವ ಗಾಡಿಗಳನ್ನು ಸ್ಥಳಾಂತರಗೊಳಿಸಿ ಸಾರ್ವಜನಿಕರು, ಬೈಕ್ ಸವಾರರು ಮತ್ತು ಭಾರಿ ಗಾತ್ರದ ವಾಹನಗಳು ಸುಗಮವಾಗಿ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತರಾದ ಎ.ವಾಸೀಂ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕರಾದ ಹೆಚ್.ಟಿ.ಸುನೀಲ್ ಕುಮಾರ್, ಶ್ರೀಮತಿ ವೈ.ಎಸ್. ಸಂಧ್ಯಾ ಹಾಗೂ ಕಿರಿಯ ಅರೋಗ್ಯ ನಿರೀಕ್ಷಕರಾದ ಎಸ್.ಅಶೋಕ್ ಕುಮಾರ್, ಮಹಾಲಿಂಗರಾಜು, ನಯಾಜ್ ಶರೀಫ್ ಮತ್ತು ದಫೇದಾರರು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದು, ಕಾರ್ಯಚರಣೆ ಯಶ್ವಸಿಗೊಳಿಸಿದರು.

About The Author

Leave a Reply

Your email address will not be published. Required fields are marked *