
ಹಿರಿಯೂರು:
ನಗರದ ನೆಹರು ಕ್ರೀಡಾಂಗಣದಲ್ಲಿ ನ್ಯೂ ಡೈಮಂಡ್ ಪೋಸ್ಟ್ ಕ್ಲಬ್ ಹಿರಿಯೂರು, ಇವರ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರ ಸಾರಥ್ಯದಲ್ಲಿ ಜನವರಿ 31 ಹಾಗೂ ಫೆಬ್ರವರಿ 1 ರ ಶನಿವಾರ ಮತ್ತು ಭಾನುವಾರ ರಾಜ್ಯಮಟ್ಟದ ಪುರುಷರ ಹೊನ್ನಲು ಬೆಳಕಿನ ಆಹ್ವಾನಿತ ಕಬ್ಬಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂಬುದಾಗಿ ನ್ಯೂ ಡೈಮಂಡ್ ಸ್ಪೋಟ್ಸ್ ಕ್ಲಬ್ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಈ ಪಂದ್ಯಾವಳಿಯಲ್ಲಿ ಸುಮಾರು 18 ತಂಡಗಳು ಭಾಗವಹಿಸಲಿದ್ದು, ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಪ್ರೇಕ್ಷಕರಿಗೆ ರಸದೌತಣ ನೀಡಲು ನೆಹರು ಕ್ರೀಡಾಂಗಣ ಸಜ್ಜಾಗಿದೆ. ಶ್ರೀ ತೇರುಮಲ್ಲೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ಈ ಕಬ್ಬಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ಹೊರಗಿನಿಂದ ಬಂದಂತಹ ತಂಡಗಳಿಗೆ ಊಟ ಮತ್ತು ವಸತಿ ಸೌಕರ್ಯವನ್ನು ಕಲ್ಪಿಸಲಾಗಿದೆ.
ಹಿರಿಯೂರಿನ ನಾಗರೀಕರು, ವರ್ತಕರು, ಸಮಾಜಸೇವಕರು, ಸಾರ್ವಜನಿಕರು ಎಲ್ಲರೂ ಸಹ ತಮ್ಮ ತನುಮನ ಧನ ಸಹಾಯದೊಂದಿಗೆ, ಈ ರಾಜ್ಯಮಟ್ಟದ ಪುರುಷರ ಹೊನ್ನಲು ಬೆಳಕಿನ ಆಹ್ವಾನಿತ ಕಬ್ಬಡಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕು ಎಂಬುದಾಗಿ ನ್ಯೂ ಡೈಮಂಡ್ ಸ್ಪೋಟ್ಸ್ ಕ್ಲಬ್ ವತಿಯಿಂದ ಮನವಿ ಮಾಡಲಾಗಿದೆ.
