
ಹಿರಿಯೂರು:
ನಗರ ವ್ಯಾಪ್ತಿಯಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಹಲವು ಬಾರಿ ನಗರಸಭೆ ಸಭಾಂಗಣದಲ್ಲಿ ಸಭೆ ಕರೆದು ಎಚ್ಚರಿಕೆ ನೀಡಿದರೂ ಸಹ ಎಚ್ಚೆತ್ತುಕೊಳ್ಳದೆ ಇರುವ ಕಾರಣ ನಿನ್ನೆ ಅಂದರೆ ಜನವರಿ 7ರಂದು ನಗರ ವ್ಯಾಪ್ತಿಯ ವಾರ್ಡ್ ನಂ:02ರ ಅಂಜನೇಯ ದೇವಸ್ಥಾನದ ಹತ್ತಿರ ಹಂದಿಗಳು ಸಂಚಾರಕ್ಕೆ ಅಡ್ಡವಾಗಿ ಬಂದ ಕಾರಣ ಬೈಕ್ ಸವಾರನಿಗೆ ಅಪಘಾತವಾಗಿ ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿಯು ಚಿಂತಾಜನಕವಾಗಿರುತ್ತದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಹೇಳಿದರು.

ನಗರದ ನಗರಸಭೆಯ ಸಭಾಂಗಣದಲ್ಲಿ ನಗರಸಭೆಯ ಸಭೆಯನ್ನು ಪೌರಾಯುಕ್ತರಾದ ಎ.ವಾಸೀಂ ಅವರ ಅಧ್ಯಕ್ಷತೆಯಲ್ಲಿ ನಗರದ ಹಂದಿ ಮಾಲೀಕರುಗಳಿಗೆ ತುರ್ತಾಗಿ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ, ನಂತರ ಅವರು ಮಾತನಾಡಿದರು.
ನಿನ್ನೆ ನಡೆದ ಅಪಘಾತಕ್ಕೆ ಹಂದಿ ಮಾಲೀಕರೇ ಹೊಣೆಗಾರರಾಗಿದ್ದು, ಕಡ್ಡಾಯವಾಗಿ ಈ ದಿನದಂದಲೇ ಸಂಪೂರ್ಣವಾಗಿ ಹಂದಿಗಳನ್ನು ನಗರ ಪ್ರದೇಶದಿಂದ ಹೊರಗಡೆ ಸಾಗಣಿಕೆ/ಸಾಕಣಿಕೆ ಮಾಡಲು ಸೂಚಿಸಿದೆ. ತಪ್ಪಿದಲ್ಲಿ ನಗರಸಭೆಯಿಂದ ಹಂದಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಸಾಗಿಸುವ ವ್ಯವಸ್ಥೆ ಮತ್ತು ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ 223ರಂತೆ ಯಾವುದೇ ನಷ್ಠಕ್ಕೆ ನಗರಸಭೆ ಜವಬ್ದಾರಿಯಾಗಿರುವುದಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದರು.

ಈ ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರವೀಂದ್ರನಾಥ್ ಅಂಗಡಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಸುನೀಲ್ ಕುಮಾರ್, ಹೆಚ್.ಟಿ.ಶ್ರೀಮತಿ ವೈ.ಎಸ್.ಸಂಧ್ಯಾ, ಕಿರಿಯ ಆರೋಗ್ಯ ನಿರೀಕ್ಷಕರಾದ ಎಸ್.ಅಶೋಕ್ ಕುಮಾರ್, ಮಹಾಲಿಂಗರಾಜು, ನಯಾಜ್, ಶರೀಫ್, ಹಾಗೂ ನಗರದ ಹಂದಿ ಮಾಲೀಕರು ಉಪಸ್ಥಿಯಲ್ಲಿದ್ದರು.

