
ಹಿರಿಯೂರು:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಿರಿಯೂರು ತಾಲ್ಲೂಕು ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಓಂಕಾರಪ್ಪ ಅವರು ಅಧ್ಯಕ್ಷತೆ ವಹಿಸಿಕೊಂಡಿದ್ದರು. ಉದ್ಘಾಟನೆಯನ್ನು ಜೆ.ಡಿ.ಎಸ್. ಮುಖಂಡರಾದ ರವೀಂದ್ರಪ್ಪ ಹಾಗೂ ಜಿಲ್ಲಾ ನಿರ್ದೇಶಕರಾದ ವಿನಯ್ ಕುಮಾರ್ ಸುವರ್ಣ ಅವರು ನಡೆಸಿಕೊಟ್ಟರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ರಚನೆ, ನಿರ್ಗತಿಕರ ಮಾಶಾಸನ, ಜ್ಞಾನವಿಕಾಸ ಕೇಂದ್ರ ರಚನೆ ಮಾಡಿ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನಗಳ ಬಗ್ಗೆ ವಿವಿಧ ಇಲಾಖೆಗಳ ಮೂಲಕ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರ ಸರ್ವಾಂಗೀಣ ಬೆಳವಣಿಗೆಗೆ ಮುಖ್ಯ ಪಾತ್ರ ಸಂಸ್ಥೆ ವಹಿಸಿಕೊಂಡಿದೆ. ಸಂಘ ರಚನೆಯಿಂದ ಸಾಮಾಜಿಕ, ಆರ್ಥಿಕ, ಶಿಸ್ತು, ಗುಣಮಟ್ಟದ ನಿರ್ವಹಣೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಯೋಜನಾಧಿಕಾರಿಯಾದ ರವಿ, ಗ್ರಾಮಪಂಚಾಯಿತ್ ಉಪಾಧ್ಯಕ್ಷರಾದ ನಟರಾಜ್, ಒಕ್ಕೂಟದ ಅಧ್ಯಕ್ಷರಾದ ಹನುಮಂತರಾಯ, ಅಂಗನವಾಡಿ ಕಾರ್ಯಕರ್ತೆ ರೂಪ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಗನ್ಮಾತೆ, ಊರಿನ ಗಣ್ಯರಾದ ಪೆದ್ಧುರಾಜ್ ಅವರು ಮತ್ತು ವಲಯದ ಮೇಲ್ವಿಚಾರಕರಾದ ಧರ್ಮೇಗೌಡ್ರು, ಜ್ಞಾನ ವಿಕಾಸ್ ಸಮನ್ವಯಾಧಿಕಾರಿ ಚೈತ್ರ, ಸೇವಾಪ್ರತಿನಿಧಿಯವರಾದ ಕೆಂಚಮ್ಮ, ರಮ್ಯಾ ಹಾಗೂ ಎಲ್ಲಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

