
ಹಿರಿಯೂರು:
ಒಬ್ಬರ ಜೀವ ಉಳಿಸಲು ನೀವು ವೈದ್ಯರಾಗಬೇಕಾಗಿಲ್ಲ, ಸಮಾಜಸೇವಾ ಮನೋಭಾವದಿಂದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರೂ ಹಾಗೂ ಸಾರ್ವಜನಿಕರೂ ತಮ್ಮ ಅಮೂಲ್ಯವಾದ ರಕ್ತವನ್ನು ದಾನ ಮಾಡುವ ಮೂಲಕ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂಬುದಾಗಿ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಕೆ.ಅಭಿನಂದನ್ ಮನವಿ ಮಾಡಿದ್ದಾರೆ.
ಪ್ರಧಾನಮಂತ್ರಿ ಸನ್ಮಾನ್ಯ ನರೇಂದ್ರಮೋದಿಯವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾಪಾರ್ಟಿ ಹಿರಿಯೂರು ಮಂಡಲದ ವತಿಯಿಂದ ಇದೇ ಸೆಪ್ಟೆಂಬರ್ 17ರಂದು ಬೆಳಗ್ಗೆ 10 ಗಂಟೆಯಿಂದ ರಕ್ತದಾನ ಶಿಬಿರವು ಹಿರಿಯೂರಿನಲ್ಲಿ ನಡೆಯಲಿದ್ದು, ನಗರದ ನಾಗರೀಕರು ಹಾಗೂ ಬಿಜೆಪಿ ಮುಖಂಡರು ಸಮಾಜ ಸೇವಾ ಮನೋಭಾವದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ರಕ್ತದಾನ ಮಾಡಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

