
ಹಿರಿಯೂರು:
ವಿದ್ಯಾರ್ಥಿಗಳು ಎಫ್.ಎಲ್.ಎನ್. ಸಾಮರ್ಥ್ಯಗಳನ್ನು ಗಳಿಸುವಲ್ಲಿ ಶಿಕ್ಷಕರ ಜೊತೆಗೆ ಪೋಷಕರು ಕೂಡ ಕೈ ಜೋಡಿಸಬೇಕು, ವಿದ್ಯಾರ್ಥಿಗಳ ಕಲಿಕೆ ಆಸಕ್ತಿದಾಯಕವಾಗಬೇಕಾದರೆ ಎಫ್.ಎಲ್.ಎನ್. ಸಾಮರ್ಥ್ಯಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂಬುದಾಗಿ ತಹಸೀಲ್ದಾರ್ ರಾದ ಸಿದ್ದೇಶ್ ಅವರು ಹೇಳಿದರು.
ತಾಲ್ಲೂಕಿನ ಚಿಗಳಿಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಫ್.ಎಲ್.ಎನ್. ಕಲಿಕಾ ಹಬ್ಬವನ್ನು ಕಲಿಕಾ ಚಿಟ್ಟೆಯನ್ನು ಅನಾವರಣ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಡಾ.ಪ್ರಮೋದ್ ರವರು ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗುತ್ತಿದ್ದು, ಅದನ್ನು ವಿದ್ಯಾಭ್ಯಾಸದ ಒಳಿತಿಗಾಗಿ ಬಳಸಿಕೊಳ್ಳಬೇಕು .ಪ್ರಶ್ನೆಯು ಪ್ರಜ್ಞೆಯಾಗಲಿ ಎಂದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಎಫ್.ಎಲ್.ಎನ್. ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಚಿಗಳಿಕಟ್ಟೆ ಗ್ರಾಮದವರಾದ ಸಿ.ಆರ್.ಧನಂಜಯ ಅವರು ಅವರ ಎಸ್.ಎಲ್.ಆರ್. ಟ್ರಸ್ಟ್ ವತಿಯಿಂದ ಯಲ್ಲದಕೆರೆ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಯ 520 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದ ಅವರು ಅಕ್ಷರ ಜ್ಞಾನ ಮತ್ತು ಗಣಿತ ಜ್ಞಾನದ ಬಗ್ಗೆ ವಿಶ್ಲೇಷಣೆ ನೀಡಿ ಇವೆರಡರ ವ್ಯತ್ಯಾಸವನ್ನು ತಿಳಿಸಿದರು.
ಇದಕ್ಕೂ ಮೊದಲು ಪ್ರಾಸ್ತವಿಕ ನುಡಿಗಳನ್ನಾಡಿದ ಡಯಟ್ ಉಪನ್ಯಾಸಕರಾದ ರೇವಣ್ಣ ಅವರು ಮಾತನಾಡಿ ವಿದ್ಯಾರ್ಥಿಗಳು ಎಫ್.ಎಲ್.ಎನ್. ಸಾಮರ್ಥ್ಯಗಳನ್ನು ಗಳಿಸಿದ್ದೆ ಆದಲ್ಲಿ ಅವರ ಮುಂದಿನ ಶೈಕ್ಷಣಿಕ ಬದುಕಿನಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂಬುದಾಗಿ ಅವರು ಹೇಳಿದರು.

ಇದೇ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ಸ್ಟಡಿ ಚೇರ್ ಕೊಡುಗೆ ನೀಡಿದ ಹಿರಿಯೂರಿನ ಅಭಿಷೇಕ್ ಸೂರಿ ಶ್ರೀಮತಿ ಪಲ್ಲವಿ, ಪ್ರಿಂಟರ್ ಕೊಡುಗೆ ನೀಡಿದ ಶ್ರೀಮತಿ ಅಂಬಾದೇವಿ ಇವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕರಾದ ಬಿ.ಆರ್.ಪ್ರಸಾದ್, ತಾಲ್ಲೂಕು ಕ್ಷೇತ್ರ ಸಮನ್ವಯಧಿಕಾರಿ ಆರ್. ಟಿ. ಎಸ್. ಶ್ರೀನಿವಾಸ್, ರಾಯಚೂರು ಮತ್ತು ಯಾದಗಿರಿ ಲ್ಯಾಂಡ್ ಆರ್ಮಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿರುವ ಸಿ.ಆರ್.ಧನಂಜಯ್, ಹಿರಿಯೂರು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಸಿ.ಹೆಚ್.ಕಾಂತರಾಜ್, ವೈದ್ಯರಾದ ಶ್ರೀಮತಿ ಪದ್ಮಶಿವರಾಜ್ ಮಧುಗಿರಿ, ಓಂಕಾರಪ್ಪ, ಲಕ್ಷ್ಮಣಪ್ಪ, ತಾಲೂಕು ಬಡ್ತಿ ಮುಖ್ಯಗುರುಗಳ ಸಂಘದ ಅಧ್ಯಕ್ಷರಾದ ಎಂ.ರಾಜಣ್ಣ, ಯಲ್ಲದಕೆರೆ ಸಿ.ಆರ್.ಪಿ. ಹೆಚ್.ದೇವೇಂದ್ರಪ್ಪ, ಮಹಾಸ್ವಾಮಿ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶಾಮಣ್ಣ, ಉಪಾಧ್ಯಕ್ಷರಾದ ಸುಪ್ರಿಯಾ ನಾಗರಾಜ್ ಸೇರಿದಂತೆ ಶಾಲೆಯ ಮುಖ್ಯಗುರುಗಳಾದ ಟಿ.ಅಶೋಕ್, ಶಿಕ್ಷಕರಾದ ಮುರುಳಿ, ತಿಪ್ಪೇಸ್ವಾಮಿ, ಹನುಮಂತಪ್ಪ, ಹರೀಶ್, ಗೀತಮ್ಮ, ಜಯಮಾಲಾ, ಹಾಗೂ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು, ಯಲ್ಲದಕೆರೆ ಕ್ಲಸ್ಟರ್ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.
