March 4, 2026
0002

ಹಿರಿಯೂರು:

ತಾಲ್ಲೂಕಿನ  ವಾಣಿವಿಲಾಸ ಸಾಗರ ಜಲಾಶಯಕ್ಕೆ  ಬಾಗಿನ ಬಿಡುವ ವೇಳೆ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ  ಜಿ.ಎಸ್. ಮಂಜುನಾಥ್ ರವರಿಗೆ ಅಹ್ವಾನ ನೀಡದಿರುವುದಕ್ಕೆ ಹಿರಿಯೂರು ಮಾದಿಗ  ಮಹಾಸಭಾದಿಂದ  ತೀವ್ರವಾದ  ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರಿ ಕಾರ್ಯಕ್ರಮದಲ್ಲಿ ನಿಗಮ ಮಂಡಳಿ ಅಧ್ಯಕ್ಷರನ್ನು  ಅಹ್ವಾನಿಸುವುದು ಕಡ್ಡಾಯ. ಜಿಲ್ಲೆಯ ಎಲ್ಲಾ ಶಾಸಕರಿಗೆ ಬಾಗಿನ  ಸಮರ್ಪಣೆ ಕಾರ್ಯಕ್ಕೆ ಅಹ್ವಾನ ನೀಡಿ ಜಿ.ಎಸ್.ಮಂಜುನಾಥ್ ಅವರನ್ನು ಮರೆತಿರುವುದು  ಶಿಷ್ಟಾಚಾರದ ಉಲ್ಲಂಘನೆಯಾಗಿದೆ.

ಇದು ಅಧೀಕೃತ ಸರ್ಕಾರಿ ಕಾರ್ಯಕ್ರಮವಾಗಿದ್ದಲ್ಲಿ ಜಿಲ್ಲಾಧಿಕಾರಿಗಳು ಸಕಾರಣ ನೀಡಬೇಕು ಮತ್ತು  ಕಾರ್ಯಪಾಲಕ ಚಂದ್ರಪ್ಪಬಾರಿಕಾರ ಇವರನ್ನು ತಕ್ಷಣ ಅಮಾನತು ಮಾಡಲು  ಹಿರಿಯೂರು ಮಾದಿಗ  ಮಹಾಸಭಾ ಆಗ್ರಹಿಸಿದೆ. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲು ಜಿ.ಎಸ್. ಅಭಿಮಾನಿಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸ್ಥಾಯಿ ಸಮಿತಿ  ಅಧ್ಯಕ್ಷರಾಧ ಎಂ.ಡಿ.ಸಣ್ಣಪ್ಪ, ಜಿ.ಎಲ್.ಮೂರ್ತಿ, ಡಾ.ಜೆ.ಆರ್.ಸುಜಾತ, ಕೃಷ್ಣಮೂರ್ತಿ ಕೃಷ್ಣಾಪುರ, ದಯಾನಂದ ಹರ್ತಿಕೋಟೆ, ಕಲ್ಲಹಟ್ಟಿ ಹರೀಶ್, ಪ್ರದೀಪ್, ಸುರೇಶ್ ಯಳನಾಡು, ಚಂದ್ರಪ್ಪ, ಘಾಟ್ ಓಂಕಾರಪ್ಪ, 19ನೇ ವಾರ್ಡ್  ಮಂಜುನಾಥ್, ಕುಮಾರ್ ದೊಡ್ಡಘಟ್ಟ, ಚಂದ್ರಪ್ಪ, ಲಕ್ಷ್ಮಣ್ ರಾವ್, ಶಂಕರ್ ಗಜ, ವಕೀಲರು ನಾಗರಾಜ್, ನಿತಿನ್, ಭರತ್, ಮಂಜುನಾಥ್, ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *