
ಹಿರಿಯೂರು:
ಭಾರತೀಯ ಭಾಷೆಗಳನ್ನು ಬ್ರಿಟಿಷ್ ಆಡಳಿತ ವಿಂಗಡನೆ ಮಾಡಿದೆ. ವೇದ ಉಪನಿಷತ್ ಗಳಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸಲಾಗಿದೆ. ಭಾಷೆಯಿಂದ ಭಾವೈಕ್ಯತೆ ಪಸರಿಸುತ್ತದೆ. ಜಾಗತೀಕರಣದಿಂದ ಮಾತೃ ಭಾಷೆ ಬದಲಾಗುತ್ತದೆ. ಪ್ರಾಕೃತಿಕ ಭಾಷೆಯನ್ನು ಗುರುತಿಸುವುದು ಮತ್ತು ಬಳಸುವುದು 12ನೇ ಶತಮಾನದಿಂದ ಕಡಿಮೆಯಾಗುತ್ತಿದೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಅವರು ಹೇಳಿದರು.
ತಾಲ್ಲೂಕಿನ ಭೀಮನಬಂಡೆ ಸಮೀಪದ ಯಜ್ಞವಲ್ಕ್ಯ ಕಾಲೇಜಿನಲ್ಲಿ ಭಾರತೀಯ ಭಾಷಾ ಪರಿವಾರ ರಾಷ್ಟ್ರೀಯ ಸಮ್ಮೇಳನನ್ನು ಉದ್ಘಾಟಿಸಿ ಅವರು ಮಾತನಾಡಿದರು.
55ಕೋಟಿ ಜನಸಂಖ್ಯೆ ಅತಿ ಹೆಚ್ಚು ಬಳಸುವ ಹಿಂದಿ ಭಾಷೆಗೆ 12 ಜ್ಞಾನಪೀಠ ಪ್ರಶಸ್ತಿ ಲಭಿಸಿದರೆ, ದ್ವಿತೀಯವಾಗಿ 4.5 ಕೋಟಿ ಜನ ಬಳಸುವ ಕನ್ನಡ ಭಾಷೆಗೆ 9 ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಶ್ಲಾಘನೀಯ. 10ಕೋಟಿ ಜನ ಬಳಸುವ ಬೆಂಗಾಳಿ ಭಾಷೆಗೆ 6 ಜ್ಞಾನಪೀಠ ಪ್ರಶಸ್ತಿಗಳು, ಮರಾಠಿ ಭಾಷೆಗ 6, ಮಲೆಯಾಳಂ ಭಾಷೆಗೆ 6, ತೆಲುಗು ಭಾಷೆಗೆ 3 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದೆ. ನಮ್ಮ ಭಾಷೆಯ ಬಳಕೆ, ಪ್ರಾಚೀನತೆ, ಪರಂಪರೆ ಹಾಗೂ ಸಮಗ್ರ ಚಿಂತನೆಗೆ ಈ ವಿಚಾರ ಸಂಕೀರ್ಣಗಳು ಉಪಯುಕ್ತವಾಗಿವೆ. ಎಂದರಲ್ಲದೆ,
ವಿಚಾರ ಸಂಕೀರ್ಣಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನಡೆಯುತ್ತವೆ. ಪದವಿಪೂರ್ವ ಕಾಲೇಜಿನ ಹಂತದಲ್ಲಿ ಇದು ತುಂಬಾ ವಿರಳ. ಆದರೆ ಯಾಜ್ಞವಲ್ಕ್ಯ ಸಂಸ್ಥೆಯು ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ನಡೆಸುತ್ತಿರುವುದು ಎಲ್ಲಾ ಸಂಶೋಧಕ ವಿದ್ವಾಂಸರುಗಳಿಗೆ ಸಹಾಯವಾಗುತ್ತದೆ ಎಂಬುದಾಗಿ ಅವರು ಹೇಳಿದರು.

ಎಸ್.ಜೆ.ಎಂ.ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಸಮಾಜಶಾಸ್ತ್ರದ ಉಪನ್ಯಾಸಕರಾದ ಡಾ.ಈಶ್ವರಪ್ಪ ಅವರು ಮಾತನಾಡಿ ಭಾಷೆಯು ಒಂದು ಸಾಧನ.ಭಾಷೆಯು ಒಂದು ಸಂಕುಚಿತಗೊಳ್ಳದೆ ವಿಶಾಲತೆಯನ್ನು ಹೊಂದಿರಬೇಕು. ಭಾರತೀಯ ಸಂಸ್ಕೃತಿಗೆ ತನ್ನದೇ ಆದ ಶ್ರೀಮಂತಿಕೆ ಇದೆ. ಯಾವುದೇ ಬ್ರಿಟೀಷರ ದಾಳಿಗೆ, ದಬ್ಬಾಳಿಕೆಗೆ ತುತ್ತಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯನ್ನು ಇನ್ನು ಸಹ ಉಳಿಸಿಕೊಳ್ಳಲಾಗಿದೆ ಎಂಬುದಾಗಿ ಅವರು ಹೇಳಿದರು.
ತುಮಕೂರು ವಿದ್ಯಾವಾಹಿನಿ ಪದವಿ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಪ್ರೇಮಾ ಅನಂತ್ ಅವರು ಕಾಳಿದಾಸನ ಮೊದಲ ಶ್ಲೋಕದಲ್ಲಿ ಮಾತು ಮತ್ತು ಅರ್ಥಗಳ ಸಿದ್ಧಿಗೆ ಪಾರ್ವತಿ ಪರಮೇಶ್ವರರನ್ನು ಉಲ್ಲೇಖಿಸಿರುವುದನ್ನು ವ್ಯಕ್ತಪಡಿಸಿದರು. ನಾಲಿಗೆ ಕುಲವನ್ನು ಹೇಳುತ್ತದೆ. ಮಾತು ವ್ಯಕ್ತಿತ್ವವನ್ನು ಹೇಳುತ್ತದೆ. ಭಾಷೆಯಲ್ಲಿ ಮಾತೃ ಭಾಷೆ, ವ್ಯವಹಾರಿಕ ಭಾಷೆ ಮತ್ತು ಗ್ರಾಂಥಿಕ ಭಾಷೆಗಳು ಇದ್ದಾವೆ. ಎಂದರಲ್ಲದೆ,
ಹಿಂದಿ, ಇಂಗ್ಲೀಷ್, ಮರಾಠಿ, ದ್ರಾವಿಡ, ಆರ್ಯನ್ ಹಾಗೂ ಎಲ್ಲಾ ಇತರೆ ಭಾಷೆಗಳು ಸೇರಿ ಭಾಷಾ ಪರಿಹಾರವಾಗಿದೆ. ಮಾತು, ಬರವಣಿಗೆ, ಓದು ಇವೆಲ್ಲವೂ ಒಂದು ಭಾಷೆಯ ವೈಶಿಷ್ಟ್ಯ ಕನ್ನಡ ಬಾಷೆಯ ಬಳಕೆಯಲ್ಲಿ ಇಂದು ಮಹಾಪ್ರಾಣಾಕ್ಷರಗಳನ್ನು ಕಾಗುಣಿತಾಕ್ಷರಗಳನ್ನು ಬಳಸದೆ ಅವುಗಳ ಶುದ್ಧತೆ ಇಂದು ಧಕ್ಕೆ ಉಂಟಾಗುತ್ತಿದೆ ಎಂಬುದಾಗಿ ಅವರು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿರುವ ಸಂಸ್ಥೆಯ ಸಂಸ್ಥಾಪಕರಾದ ಸುರೇಶ್ ಅವರು ಮಾತನಾಡಿ ವಸಾಹತುಷಾಹಿ, ಬಂಡವಾಳಶಾಹಿಗಳ, ಬಗ್ಗೆ ತಿಳಿಸುತ್ತಾ ಭಾಷೆಯ ಪ್ರೌಢಿಮೆ, ಶುದ‍್ಧ ಮಾತುಗಾರಿಕೆ, ಒಳ್ಳೆಯ ಸಾಧನೆಗೆ ದಾರಿ.
ನೆಹರು, ಋಷಿಮುನಿಗಳು ದಾಸ ಶರಣರು ಸಾಹಿತಿಗಳು ಇವರೆಲ್ಲರೂ ಭಾಷೆಯ ಬಳಕೆಯಿಂದ ಸಾಧನೆ ಮಾಡಿದವರು. ಎಲ್ಲಾ ಭಾಷೆಗಳ ಮೂಲ ಮತ್ತು ತಾಯಿ ಸಂಸ್ಕೃತ ಭಾಷೆಯಾಗಿದೆ.ಆದರೆ ಇದು ಹಾಡು ಭಾಷೆಗೆ ಇಂದು ಬಳಕೆಯಾಗುತ್ತಿಲ್ಲ. ಭಾಷೆಯ ಮಜಲುಗಳು, ಮಹಲುಗಳನ್ನು ತಿಳಿಯುವುದು ಉತ್ತಮ ಎಂಬುದಾಗಿ ಅವರು ಹೇಳಿದರು.

ಉಪನ್ಯಾಸಕರಾದ ವೇಣುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರ್ಷ ನಿರೂಪಿಸಿದರು. ಶಾಲೆಯ ಪ್ರಾಂಶುಪಾಲ ಶ್ರೀಶಾನ್ ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕೊನೆಯಲ್ಲಿ ಶಿವಾನಂದ್ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕರಾದ ಡಾ.ಜ್ಯೋತಿಶಂಕರ್, ಭಾರತೀಯ ವಿಜ್ಞಾನ ಸಂಸ್ಥೆಯ ಉಪನೋಂದಣಿ ಅಧಿಕಾರಿ ವೀರಣ್ಣ ಕಮ್ಮಾರ್, ನಿವೃತ್ತ ಪ್ರಾಂಶುಪಾಲ ಹಾಗೂ ಶಾಸನಶಾಸ್ತ್ರಜ್ಞ ಡಾ.ರಾಜಶೇಖರಪ್ಪ, ಸಂಪನ್ಮೂಲ ವ್ಯಕ್ತಿ ಬಾಲಾಜಿ, ಹಲವಾರು ಸಂಶೋಧನಾ ವಿದ್ವಾಂಸರು ಈ ಸಮ್ಮೆಳನದಲ್ಲಿ ಉಪಸ್ಥಿತರಿದ್ದರು.

