

ಹಿರಿಯೂರು:
ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸದರಿ ಸಾಲಿನಲ್ಲಿ ರೈತ ಸದಸ್ಯರಿಗೆ 75ಲಕ್ಷ ರೂಗಳು ಆರ್ಥಿಕ ಹಂಚಿಕೆಯಾಗಿದ್ದು, ಪ್ರಸಕ್ತ ಸಾಲಿನ ವಸೂಲಾತಿ ಶೇ.94% ರಷ್ಟು ಪ್ರಗತಿಯಾಗಿರುತ್ತದೆ ಎಂಬುದಾಗಿ ಬ್ಯಾಂಕಿನ ಅಧ್ಯಕ್ಷರಾದ ಡಿ.ತಿಪ್ಪೇಸ್ವಾಮಿ ಎಂ.ಡಿ.ಕೋಟೆ ಅವರು ಹೇಳಿದರು.

ನಗರದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಈ ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿಕಮಲಮ್ಮ ಮತ್ತು ನಿರ್ದೇಶಕರುಗಳಾದ ಪಿ.ಎಸ್.ಸಾದತ್ ಉಲ್ಲಾ, ಕೆ.ಗಿರಿಜಣ್ಣ, ಕೆ.ಕೃಷ್ಣಯ್ಯ, ಎಸ್. ಜೆ. ಹನುಮಂತರಾಯ, ಪಿ.ಎಲ್.ಶಿವಣ್ಣ, ಟಿ.ಮಲ್ಲಿಕಾರ್ಜುನಯ್ಯ, ಕೆ.ಶಂಕರಮೂರ್ತಿ, ಮಲ್ಲಾನಾಯಕ್, ಮಂಜಾನಾಯ್ಕ, ಮನೋಹರ್, ಶ್ರೀಮತಿ ಲಕ್ಷ್ಮೀದೇವಿ ಶಶಿಧರ್, ಶ್ರೀಮತಿ ಅಂಬುಜಮ್ಮ, ವ್ಯವಸ್ಥಾಪಕರಾದ ಶಿವಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಆರಂಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಸಾದತ್ ವುಲ್ಲಾ ಅವರು ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ನಿರ್ದೇಶಕರಾದ ಗಿರಿಜಪ್ಪ ಅವರು ವಂದಿಸಿದರು.