March 2, 2026
0003

ಹಿರಿಯೂರು:

ತಾಲ್ಲೂಕಿನ ಬೇತೂರು ಗಡಿ ಗ್ರಾಮದಲ್ಲಿ ಶ್ರೀದೇವಿ ಜಾತ್ರೆ ಮಹೋತ್ಸವವು ಶನಿವಾರ ಅಪಾರ ಭಕ್ತರ ಸಮ್ಮುಖದಲ್ಲಿ  ಭಕ್ತಿ-ಭಾವದಿಂದ ಅದ್ದೂರಿಯಾಗಿ ನಡೆಯಿತು. ಶ್ರೀದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ  ಹೂವಿನ ತೇರಿಗೆ ನಾನಾ ಭಾಗಗಳಿಂದ  ಜನ ಸಾಗರ ಹರಿದು ಬಂದಿತ್ತು.

ಹೂವಿನ ತೇರಿನ ಅಂಗವಾಗಿ ಶ್ರೀದೇವಿ ದೇವಸ್ಥಾನದ ರಥೋತ್ಸವ ಸಂದರ್ಭದಲ್ಲಿ ಹೂವುಗಳಿಂದ ಅಲಂಕರಿಸಿದ  ತೇರನ್ನು ಎಳೆಯಲು  ಅಪಾರ ಸಂಖ್ಯೆಯ ಜನರು ಆಗಮಿಸಿದ್ದರು. ಭಕ್ತಿ ಮತ್ತು ಉತ್ಸಾಹದಿಂದ ಹರಿದು ಬಂದ ಜನಸಾಗರವನ್ನು ಸೂಚಿಸುತ್ತದೆ.

ನಾನಾ ಬಗೆಯ ಹೂವುಗಳಿಂದ ಭವ್ಯವಾಗಿ ರಥವನ್ನು ಅಲಂಕರಿಸಲಾಗಿತ್ತು. ಹೂವಿನ ತೇರು ನೋಡಲು  ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಶ್ರೀದೇವಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಸೇರಿ, ಹೂವಿನ ತೇರಿಗೆ ಸಾಕ್ಷಿಯಾಗಲು ಜನಸಾಗರವೇ ಹರಿದು ಬಂದಿತ್ತು.

ಶ್ರೀದೇವಿ ಉತ್ಸವದ ಅಂಗವಾಗಿ  ಬೇತೂರು ಸೇರಿದಂತೆ ಅಕ್ಕಪಕ್ಕದ ಊರುಗಳಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬವಾಗಿದ್ದು, ದೇವತೆಗಳ ಉತ್ಸವಗಳನ್ನು ಆಚರಿಸಲು ಜನರು ಒಟ್ಟಾಗಿ ಸೇರಿದ್ದರು.

ಮೆರವಣಿಗೆಗಳು, ವಿಶೇಷ ಪೂಜೆಗಳು ನಡೆದವು.ಅಲ್ಲದೆ ಬೀದಿ ಬದಿಯಲ್ಲಿ ಮಕ್ಕಳ ಆಟಿಕೆಗಳು ಸೇರಿದಂತೆ ದೊಡ್ಡ ಸಂಕ್ಯೆಯಲ್ಲಿ ವ್ಯಾಪಾರ ಮಳಿಗೆಗಳನ್ನು ಇರಿಸಲಾಗಿತ್ತು. ಆಭರಣಗಳು, ಬಟ್ಟೆಗಳು, ಗೃಹೋಪಕರಣಗಳು ಮತ್ತು ಆಹಾರ ಪದಾರ್ಥಗಳ  ಮಳಿಗೆಗಳನ್ನು ಇರಿಸಲಾಗಿತ್ತು.

ಶ್ರೀ ದೇವಿಯ ಉತ್ಸವದ ಅಂಗವಾಗಿ  ಶ್ರೀದೇವಿಯ  ವಿಗ್ರಹವನ್ನು ಅಲಂಕರಿಸದ ತೇರಿನಲ್ಲಿ ಕೂರಿಸಿ ಮೆರವಣಿಗೆ, ವಿಶೇಷ ಪೂಜೆಗಳು(ತೆಂಗಿನಕಾಯಿ ಪವಾಡ) ಮತ್ತು ನೈವೇದ್ಯಗಳು ಮೂಲಕ ಹೂವಿನ ತೇರು ಆಚರಿಸಲಾಯಿತು.

About The Author

Leave a Reply

Your email address will not be published. Required fields are marked *