March 6, 2026
000002

ಹಿರಿಯೂರು:     

ನಗರಸಭೆಯ ಪೌರಕಾರ್ಮಿಕರು ನಗರದ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನವನ್ನು ಕೊಡುವ ಜೊತೆಗೆ,  ನಿಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬೇಕು, ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸೇವೆ ಅತ್ಯಗತ್ಯ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.

ನಗರಸಭೆಯ ಪೌರಕಾರ್ಮಿಕರಿಗೆ ಸುರಾಕ್ಷ ಧಿರಿಸುಗಳನ್ನು ವಿತರಿಸಿ, ಎಲ್ಲಾ ಪೌರಕಾರ್ಮಿಕರಗಳಿಗೆ 2026ನೇ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿ, ನಂತರ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಎಲ್ಲಾ ಪೌರಾಕಾರ್ಮಿಕರುಗಳಿಗೆ  ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು ಸಿಹಿ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ನಗರಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ, ಪೌರಾಯುಕ್ತ ಎ.ವಾಸೀಂ, ಮಾಜಿ ನಗರಸಭಾ ಸದಸ್ಯರುಗಳು ಹಾಗೂ ಆರೋಗ್ಯ ನೀರುಕ್ಷಕರುಗಳಾದ ಸುನೀಲ್ ಕುಮಾರ್, ಮಹಾಲಿಂಗರಾಜು, ಆಶೋಕಕುಮಾರ್, ನಯಾಜ್ ಷರೀಪ್,  ಪೌರನೌಕರರ ಸಂಘದ ಅಧ್ಯಕ್ಷರಾದ ಹನುಮಂತರಾಜ್, ಪ್ರಧಾನ ಕಾರ್ಯದರ್ಶಿ ಕೆ.ರಮೇಶ್ ಮತ್ತು ದಪೇದಾರರುಗಳು ಹಾಗೂ  ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *