
ಹಿರಿಯೂರು:
ನಗರದ ನಗರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ “ಮನೆಯಲ್ಲೇ ಕುಳಿತು ಇ-ಖಾತಾವನ್ನು ಪಡೆದುಕೊಳ್ಳಿ ಎಂಬ ಕಾರ್ಯಕ್ರಮವು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.

ನಗರದ ನಗರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ “ಮನೆಯಲ್ಲೇ ಕುಳಿತು ಇ-ಖಾತಾವನ್ನು ಪಡೆದುಕೊಳ್ಳಿ” ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಡ್ರಾಪ್ಟ ಇ-ಆಸ್ತಿಪತ್ರಗಳನ್ನು ವಿತರಿಸಿ, ನಂತರ ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಖಾದಿರಮೇಶ, ಪೌರಾಯುಕ್ತ ಎ.ವಾಸೀಂ, ಮಾಜಿ ನಗರಸಭಾ ಸದಸ್ಯರುಗಳು , ಕಂದಾಯ ಅಧಿಕಾರಿ ಜಬೀವುಲ್ಲಾ, ಕಂದಾಯ ನೀರಿಕ್ಷಕರುಗಳಾದ ವಿಜಯ ಕುಮಾರ್, ಜುನೇದ್ ಸಿರಾಜ್, ಕಂದಾಯ ಸಿಬ್ಬಂದಿಗಳಾದ ಸುರೇಶ, ವಿನಯ್, ಮಲ್ಲಿಕಾರ್ಜುನ, ಮಹಾಂತೇಶ್, ಶ್ರೀನಿವಾಸ್, ಪಾಂಡುರಂಗಪ್ಪ ಹಾಗೂ ಪೌರ ನೌಕರರ ಸಂಘದ ಅಧ್ಯಕ್ಷರ ಹನುಮಂತರಾಜ್, ಪ್ರಧಾನ ಕಾರ್ಯದರ್ಶಿ ಕೆ.ರಮೇಶ್ ಮತ್ತು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು

