
ಹಿರಿಯೂರು:
ಆಧುನಿಕ ಕಂಪ್ಯೂಟರ್ ಜ್ಞಾನ ಅತ್ಯವಶ್ಯಕವಾಗಿದ್ದು, ಇದೀಗ ಪ್ರಪಂಚಾದ್ಯಂತ ಎ.ಐ.ಕೋರ್ಸ್ ಗಳು ಸ್ಥಾಪನೆ ಆಗುತ್ತಿದ್ದು, ಇಂದಿನ ಕಾಲದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕಂಪ್ಯೂಟರ್ ಕಲಿಕೆ ಹಾಗೂ ಬಳಕೆ ಮಾಡುವ ಕಲೆ ಗೊತ್ತಿರಬೇಕು ಎಂಬುದಾಗಿ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜಿನ ಉಪನ್ಯಾಸಕರಾದ ಈ.ಪ್ರಕಾಶ್ ಅವರು ಹೇಳಿದರು.
ನಗರದ ಎ.ಎಂ.ಎಸ್. ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ 2026ನೇ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ,ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಂಪ್ಯೂಟರ್ ಕೋರ್ಸುಗಳ ಬಗ್ಗೆ ತಿಳುವಳಿಕೆ ಹೊಂದಿರಬೇಕು, ಕಂಪ್ಯೂಟರ್ ಕಲಿಕೆಯು ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಆಡು ಮುಟ್ಟದ ಸೊಪ್ಪಿಲ್ಲ, ಕಂಪ್ಯೋಟರ್ ಬಳಕೆ ಮಾಡದಿರುವ ಕ್ಷೇತ್ರವಿಲ್ಲ, ನೀವೆಲ್ಲರೂ ಕಂಪ್ಯೂಟರ್ ಕಲಿಕೆಯನ್ನು ನೈಪುಣ್ಯವನ್ನು ಸಾಧಿಸಬೇಕು ಎಂಬುದಾಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಪಿ ರೋಹಿಣಿ ಮುರುಳಿಧರ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜಿನ ಉಪನ್ಯಾಸಕರಾದ ಮಂಜುನಾಥ್ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಕಾರ್ಯದರ್ಶಿ ಪಿ.ವಿ.ಗೋವಿಂದರಾಜು ಉಪಸ್ಥಿತಿಯಲ್ಲಿದ್ದರು. ಈ ಕಾರ್ಯಕ್ರಮವನ್ನು ಎ.ಎಂ.ಎಸ್. ಕಂಪ್ಯೂಟರ್ ತರಬೇತಿ ಕೇಂದ್ರದ ಸಂಸ್ಥಾಪಕ ಸಿ.ಮುರುಳಿಧರ್ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ಹೊಸ ವರ್ಷವನ್ನು ಆಚರಣೆ ಮಾಡಿದರು.

