
ಹಿರಿಯೂರು :
ಶ್ರೀಶುಭೋದಯ ಶೈಕ್ಷಣಿಕ ಸೇವಾ ಆಶ್ರಮದ ಹಿತೈಷಿಗಳೂ, ದಾನಿಗಳಾದ ಶ್ರೀಗಣೇಶ್ ನವರು ಪ್ರತಿ ತಿಂಗಳಲ್ಲಿ ಮೊದಲನೇ ಬುಧವಾರದಂದು ಆಶ್ರಮದ ಎಲ್ಲಾ ಹಿರಿಯರಿಗೆ ಊಟದ ವ್ಯವಸ್ಥೆ ಮಾಡಿಸಿದ್ದಾರೆ ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಹೇಳಿದರು.
ಶ್ರೀಶುಭೋದಯ ವೃದ್ಧಾಶ್ರಮದ ಎಲ್ಲಾ ಹಿರಿಯರಿಗೆ ಊಟದ ವ್ಯವಸ್ಥೆ ಮಾಡಿರುವ ಶ್ರೀಯುತರ ಸೇವಾಮನೋಭಾವ ನಿಜಕ್ಕೂ ಅಭಿನಂದನೀಯ, ಶ್ರೀಯುತ ಗಣೇಶ್ ರವರಿಗೆ ಆಶ್ರಮದ ಹಿರಿಯರ ಪರವಾಗಿ ತುಂಬು ಹೃದಯದ ಧನ್ಯವಾದಗಳು ಎಂಬುದಾಗಿ ಹೇಳಿದರು.

