
ಹಿರಿಯೂರು:
ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಶ್ರೀಯುತ ರಾಮಕೃಷ್ಣಪ್ಪನವರ ಜನ್ಮದಿನದ ಪ್ರಯುಕ್ತ ಇಂದು ಸರ್ಕಾರಿ ಶಾಲೆಗಳಾದ ಹುಚ್ಚವನಹಳ್ಳಿ ಪಕ್ಕದಲ್ಲಿರುವ ಹೊಸೂರು ಖ್ಯಾತಿ ದೇವರಹಟ್ಟಿ ಮತ್ತು ಆದಿವಾಲ ಗೊಲ್ಲರಹಟ್ಟಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ವಿದ್ಯಾಭ್ಯಾಸದ ಪರಿಕರಗಳನ್ನು ನೀಡಿ ಮಕ್ಕಳಿಗೆ ಸಿಹಿಯನ್ನು ಹಂಚಲಾಯಿತು.
ಈ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಗೌರವಾಧ್ಯಕ್ಷರಾದ ಗೋ.ಬಸವರಾಜ್, ಶಿವಣ್ಣ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ.ಕೆ.ಎಸ್. ದಾದಾಪೀರ್, ನಗರಾಧ್ಯಕ್ಷರಾದ ಮೊಹಮ್ಮದ್ ಜಾಕೀರ್, ಕಾರ್ಮಿಕರ ನಗರ ಉಪಾಧ್ಯಕ್ಷರು ಆಫ್ರಿದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

