
ಹಿರಿಯೂರು :
ಕಳೆದ 2025 ನೇ ವರ್ಷದಲ್ಲಿ ನಡೆದುಹೋದ ಕಹಿ ನೆನಪುಗಳನ್ನು ಮರೆತು, ಕೇವಲ ಸಿಹಿನೆನಪುಗಳನ್ನು ಮಾತ್ರ ಹೊಸ ವರ್ಷದಲ್ಲಿ ಮೆಲುಕು ಹಾಕುವ ಮೂಲಕ ಇಂದಿನ 2026ರ ಹೊಸವರ್ಷವನ್ನು ನಾವೆಲ್ಲರೂ ಸಡಗರ ಸಂಭ್ರಮಗಳಿಂದ ಸ್ವಾಗತಿಸೋಣ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2026ರ ಹೊಸವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ನಂತರ ಅವರು ಮಾತನಾಡಿದರು.

ಈ ಹೊಸವರ್ಷವು ನಿಮ್ಮೆಲ್ಲರ ಬದುಕಿನಲ್ಲಿ ಹೊಸ ಸಂಭ್ರಮ, ಸಂತೋಷ, ಉತ್ಸಾಹವನ್ನು ನೀಡುವುದರ ಜೊತೆಗೆ ಜೀವನದಲ್ಲಿ ಸುಖಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂಬುದಾಗಿ ಶುಭಹಾರೈಸಿದರಲ್ಲದೆ,

ಈ ಹೊಸವರ್ಷದಲ್ಲಿ ಬರುವ ವಾರ್ಷಿಕ ಪರೀಕ್ಷೆಗೆ ಈಗಿನಿಂದಲೇ ಸತತ ಪರಿಶ್ರಮದಿಂದ ಅಭ್ಯಾಸ ಮಾಡುವ ಮೂಲಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವತ್ತ ನಿಮ್ಮ ಗಮನವನ್ನು ಹರಿಸಬೇಕು ಎಂಬುದಾಗಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆ ಮುಖ್ಯಶಿಕ್ಷಕಿಯಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಕೋ-ಆರ್ಡಿನೇಟರ್ ಶ್ರೀಮತಿ ರಚನ, ಶಿಕ್ಷಕಿಯರುಗಳಾದ ಶ್ರೀಮತಿ ರಜಿಯಾ, ಶ್ರೀಮತಿ ಗಂಗಮ್ಮ, ಶ್ರೀಮತಿ ರಂಜಿತಾ, ಶ್ರೀಮತಿ ಸಬೀಹಾ, ಶ್ರೀಮತಿ ಮುಬೀನಾ, ಶ್ರೀಮತಿ ಮಮತಾ, ಶ್ರೀಮತಿ ದ್ರಾಕ್ಷಾಯಣಿ, ಶ್ರೀಮತಿ ಸುಲೋಚನಾ, ಶ್ರೀಮತಿ ಅಕ್ಷಿತಾ, ಕಾವ್ಯ, ಪೂಜಾ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಶ್ರೀಮತಿ ಜಯಸುಧಾ, ಶಿಕ್ಷಕರಾದ ಶಿವರಾಜ್ ನಾಯಕ್, ಸೇರಿದಂತೆ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

