
ಹಿರಿಯೂರು:
ರಸ ಋಷಿ ಕುವೆಂಪುರವರು ರಚಿಸಿರುವ ಸಾಹಿತ್ಯ,ಕೃತಿಗಳು ಮತ್ತು ಕಾದಂಬರಿಗಳು ಅವರ ಅಭಿವ್ಯಕ್ತಿ ವ್ಯಕ್ತಿತ್ವ ಹಾಗೂ ವೈಚಾರಿಕತೆಯನ್ನ ಬಿಂಬಿಸುತ್ತವೆಎಂಬುದಾಗಿ ಸಮಾಜ ಸೇವಕಿ ಶ್ರೀಮತಿ ಶಶಿಕಲಾರವಿಶಂಕರ್ ಅವರು ಹೇಳಿದರು.
ನಗರದ ಶ್ರೀ ಸತ್ಯಸಾಯಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಳ್ಳಲಾಗಿದ್ದ ಕುವೆಂಪುರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಾಲೆಗಳಲ್ಲಿ ದೊರೆಯುವ ಗ್ರಂಥಾಲಯದಿಂದ ಅನೇಕ ಪುಸ್ತಕಗಳನ್ನು ಬಳಸಿಕೊಂಡು ಓದುವ ಹವ್ಯಾಸ ರೂಢಿಸಿಕೊಂಡು ತಾವು ಕೂಡ ಸಾಹಿತ್ಯ ಕೃತಿಗಳನ್ನು ರಚಿಸುವಂತಹ ಸಾಮಾರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.

ಎಂ.ಜಿ.ರಂಗಸ್ವಾಮಿ ಅವರು ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಭಾರತದಲ್ಲಿ ಅನೇಕ ಜಾತಿ,ಮತ, ಪಂಥಗಳು ಇದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಸಮಾನತೆಯಂತೆ ಜೀವನವನ್ನು ನಡೆಸಬೇಕು ಹಾಗೂ ಕುವೆಂಪುರವರಂತೆ ವಿಶ್ವ ಮಾನವ ಸಂದೇಶವನ್ನು ತಮ್ಮ ಕೃತಿಗಳಲ್ಲಿ ರಚಿಸಿದ್ದು ಮನುಷ್ಯ ವಿಭಿನ್ನ ಪಾತ್ರಗಳನ್ನು ತಮ್ಮ ಕೃತಿಗಳಲ್ಲಿ ವ್ಯಕ್ತಪಡಿಸಿದ್ದಾರೆ.ಎಂದರಲ್ಲದೆ,
ಕುವೆಂಪುರವರ ಜೊತೆ ನಾನು ಮಾತನಾಡಿದ್ದು ಇದು ಒಂದು ಅವಿಸ್ಮರಣೀಯ ಎಂದು ತಿಳಿಸಿ ವಿಶ್ವಮಾನವರಾಗಿ ಬಾಳಬೇಕು.ಮಕ್ಕಳಿಗೆ ಸಜ್ಜನರ ಸಹವಾಸ ಮಾಡಿ ದುರ್ಜನರ ಸಹವಾಸ ಮಾಡಬಾರದು ಎಂಬುದಾಗಿ ಕಿವಿಮಾತು ಹೇಳಿದರು.
ಕುವೆಂಪುರವರ ಜನ್ಮದಿನಾಚರಣೆ ಅಂಗವಾಗಿ ಮಾರುತೇಶ್ ಕೂನಿಕೆರೆ ಪತ್ರಕರ್ತರು ಇವರು ಕುವೆಂಪುರವರು ರಚಿಸಿರುವ ಕವನವನ್ನು ರಾಗಬದ್ಧವಾಗಿ ಹಾಡಿದರು. ಕುವೆಂಪುರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಈರಣ್ಣ ಮುಖ್ಯ ಶಿಕ್ಷಕರು ಹೊಸಯಳನಾಡು ಇವರು ಕುವೆಂಪುರವರ ಜೀವನದ ಸ್ವತಹ ರಚಿಸಿದ ಕಾವ್ಯವಾಚನ ಮಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಕನ್ನಡಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿ.ರಾಮಚಂದ್ರಪ್ಪ ಅವರು ಮಹಾತ್ಮ ಗಾಂಧೀಜಿ ರಾಷ್ಟ್ರಪಿತ ಹೇಗೋ ಹಾಗೇ ಕುವೆಂಪುರವರು ವಿಶ್ವ ಮಾನವ ಎಂಬ ಹೆಸರು ಪಡೆದಿದ್ದರು. ಕುವೆಂಪುರವರ ಹುಟ್ಟು ಅವರ ಜೀವನದ ಬಗ್ಗೆ ಸರಳ ಮಾತುಗಳಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕನ್ನಡಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಪ್ರೇಮ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ರವಿಚಂದ್ರನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ.ಮಹಾಸ್ವಾಮಿ ಹರ್ತಿಕೋಟೆ, ಕಸಬಾ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಟಿ.ಪ್ರಸನ್ನ ಪೊಲೀಸ್ ಬೇಟೆ, ಜೆ.ಜೆ.ಹಳ್ಳಿ ಹೋಬಳಿಯ ಅಧ್ಯಕ್ಷರಾದ ವೀರೇಶ್, ಐಮಂಗಲ ಹೋಬಳಿಯ ಅಧ್ಯಕ್ಷರಾದ ಪಿ.ಆರ್.ತಿಪ್ಪೇಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಮತ್ತು ನಿಜಲಿಂಗಪ್ಪ ಇವರು ಸ್ವಾಗತಿಸಿದರು. ಮಮತಾ ಕಾರ್ಯಕ್ರಮ ನಿರೂಪಿಸಿದರು.
ಸತ್ಯಸಾಯಿ ಶಾಲೆಯ ಮುಖ್ಯ ಶಿಕ್ಷಕರು ಅರವಿಂದ್ ಸಾಯಿ ನಿರಂಜನ್, ಪ್ರದೀಪ್, ಭೀಮಪ್ಪ ನಾಯಕ ಿತರ ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದದರು.
