
ಹಿರಿಯೂರು:
ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವ ಶಿಕ್ಷಕರ ಸೇವೆ ಎಂದಿಗೂ ಮರೆಯಲಾಗದು. ಅಂತಹ ಶಿಕ್ಷಕರ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವಪೂರ್ಣ ಎಂಬುದಾಗಿ ಬಿ.ಎಲ್.ಗೌಡ ಸ್ಮಾರಕ ಪ್ರೌಢಶಾಲೆ ಸಂಸ್ಥಾಪಕರಾದ ನರಸಿಂಗ್ ರಾವ್ ಅವರು ಹೇಳಿದರು.
ವಾಣಿವಿಲಾಸಪುರ ಬಿ.ಎಲ್.ಗೌಡ ಸ್ಮಾರಕ, ಸಂಯುಕ್ತ ಪದವಿಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದಲ್ಲಿ ಭಾನುವಾರ 1998-2001ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿದ್ಯಾಸಂಸ್ಥೆ ಸಂಸ್ಥಾಪಕರಾದ ವೆಂಕಟಾಚಲಪತಿ ಅವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಅನಂತರೆಡ್ಡಿ, ತಿಪ್ಪೇಸ್ವಾಮಿ, ಚಂದ್ರಹಾಸರೆಡ್ಡಿ, ಮೆಹಬೂಬು, ಪುಟ್ಟರಂಗಪ್ಪ, ಈಶ್ವರಪ್ಪ, ಅನ್ನಪೂರ್ಣ, ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಗೀತಾರಂಗನಾಥ್, ಹಳೆಯ ವಿದ್ಯಾರ್ಥಿಗಳಾದ ಗಂಗಮ್ಮ, ರಾಮಲಿಂಗಪ್ಪ, ತಿಮ್ಮರಾಜು, ಸೋಮಶೇಖರ್, ನಂದಿನಿ, ಅಂಬಿಕಾ, ತಿಪ್ಪಮ್ಮ, ತನುಜ, ತಿಮ್ಮರಾಯಪ್ಪ, ಸಿದ್ದೇಶ್ವರ, ಪಾರ್ಥಲಿಂಗಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
