March 3, 2026
00003

?????????????????????????????????????????????????????????

ಹಿರಿಯೂರು:

ಶ್ರೀರಂಗನಾಥ ಪದವಿಪೂರ್ವ ಕಾಲೇಜು ಹಿರಿಯೂರು ಹಾಗೂ ಶ್ರೀ ಚೈತನ್ಯ ಇನ್ಫಿನಿಟಿ ಲರ್ನ್ ಸಂಯೋಗದೊಂದಿಗೆ ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎಸ್.ಆರ್.ಪಿ.ಯು. ಸ್ಕಾಲರ್ಶಿಪ ಟೆಸ್ಟ್ ನ್ನು ಹಮ್ಮಿಕೊಳ್ಳಲಾಗಿತ್ತು.

 ಅದರಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಪರೀಕ್ಷೆಯು ತುಂಬಾ ವ್ಯವಸ್ಥಿತವಾಗಿ ನಡೆದಿದ್ದು, ನಂತರದಲ್ಲಿ ಎಲ್ಲಾ ಅಭ್ಯರ್ಥಿಗಳು ಹಾಗೂ ಪೋಷಕರಿಗೆ ಲಘುಪಹಾರ ವ್ಯವಸ್ಥೆ, ಕಾಲೇಜಿನ ವತಿಯಿಂದ ಮಾಡಲಾಯಿತು.

 ನಂತರದಲ್ಲಿ ಶ್ರೀ ಚೈತನ್ಯ ಇನ್ಫಿನಿಟಿ ಲರ್ನ್ ವತಿಯಿಂದ ೆಲ್ಲಾ ವಿದ್ಯಾರ್ಥಿಗಳಿಗೂ ಜೆ.ಇ.ಇ. ನೀಟ್ ಹಾಗೂ ಸಿ.ಇ.ಟಿ.ಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಯಿತು.

ಅದರೊಂದಿಗೆ ಬೇರೆ ಜಿಲ್ಲೆಯಿಂದ ಕರೆಸಿದ್ದಂತಹ ಸಂಪನ್ಮೂಲ ವ್ಯಕ್ತಿಗಳಿಂದ  ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಬರುವಂತಹ  ಪ್ರಮುಖ ಪ್ರಶ್ನೆಗಳನ್ನು  ಚರ್ಚಿಸಲಾಯಿತು.  ಅದರೊಂದಿಗೆ ಪರೀಕ್ಷೆಯ ಸಂಪೂರ್ಣ  ಮಾಹಿತಿಯನ್ನು  ವಿದ್ಯಾರ್ಥಿಗಳಿಗೆ ನೀಡಲಾಯಿತು.

?????????????????????????????????????????????????????????

  ಈ ಕಾರ್ಯಕ್ರಮದಲ್ಲಿ  ಅಧ್ಯಕ್ಷತೆಯನ್ನು ವೀರ ರಿಯಪ್ಪನವರು ವಹಿಸಿದ್ದರು. ಸಿ.ಇ.ಒ.ಝೇಂಕಾರ್ ರಂಗನಾಥ್ ಎಸ್.ವಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಹಾಗೂ ಮಾಂಟೆಸ್ಸರಿ ಸ್ಕೂಲ್ ಮುಖ್ಯೋಪಧ್ಯಾಯರು, ಶಿಕ್ಷಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *