March 3, 2026
003

ಹಿರಿಯೂರು :

ನಗರದ ಲಕ್ಷ್ಮಮ್ಮ ಬಡಾವಣೆಯಲ್ಲಿರುವ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿದೇವಸ್ಥಾನದಲ್ಲಿ ಇದೇ 30ರ ಮಂಗಳವಾರ ವೈಕುಂಠ ಏಕಾದಶಿಯ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಅಂದು ಮುಂಜಾನೆ 2 ಗಂಟೆಯಿಂದ ಸುಪ್ರಭಾತ, ಪಂಚಾಮೃತ ಅಭಿಷೇಕ, ಶ್ರೀನಿವಾಸ ಅಷ್ಟೋತ್ತರ, ಮಹಾಸಂಕಲ್ಪ ಅಲಂಕಾರ ನಂತರ ದೇವಸ್ಥಾನ ಮಹಿಳಾ ಮಂಡಳಿಯವರಿಂದ ವಿಷ್ಣು ಸಹಸ್ರನಾಮ ಪಾರಾಯಣ, ಸುಪ್ರಭಾತ ಸೇವೆ ಬೆಳಿಗ್ಗೆ 4:30 ರಿಂದ ಭಕ್ತ ಮಹಾಶಯರಿಗೆ ಸ್ವಾಮಿಯ ದಿವ್ಯದರ್ಶನ ಹಾಗೂ ವೈಕುಂಠ ಸಪ್ತ ದ್ವಾರದಿಂದ ಪ್ರವೇಶ ಇರುತ್ತದೆ.

ಸ್ವಾಮಿಯ ದರ್ಶನದ ನಂತರ ಲಡ್ಡು ಪ್ರಸಾದ ವಿನಿಯೋಗ ಇರುತ್ತದೆ. ಸಂಜೆ ಶ್ರೀಹರಿವಾಸವಿ ಭಜನಾ ಮಂಡಳಿ ವತಿಯಿಂದ ಹಾಗೂ ಶ್ರೀ ರಾಗ ಭಜನಾ ಮಂಡಳಿ, ಕನ್ನಿಕಾ ಭಜನಾ ಮಂಡಳಿ ಹಾಗೂ ದೇವಸ್ಥಾನದ ಮಹಿಳಾ ಮಂಡಳಿಯವರಿಂದ ಭಜನೆ ಭಕ್ತಿ ಗೀತೆಗಳ ಗಾಯನ ಹಾಗೂ ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ಭಕ್ತಾದಿಗಳು ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ಸಮಿತಿಯ ಸರ್ವ ಸದಸ್ಯರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *