March 3, 2026
00003

ಹಿರಿಯೂರು:

ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯ ಅವರು ಕಠಿಣ ಸವಾಲುಗಳ ನಡುವೆಯೂ  ದೇಶಕ್ಕೆ ದಿಟ್ಟ ನಾಯಕತ್ವ ನೀಡಿದ  ಮಹಾನ್ ರಾಷ್ಟ್ರನಾಯಕರು ಎಂಬುದಾಗಿ ಲೋಕಸಭಾ ಸದಸ್ಯರಾದ ಗೋವಿಂದ ಎಂ.ಕಾರಜೋಳ ಅವರು ಹೇಳಿದರು.

ನಗರದ ರೋಟರಿ ಭವನದಲ್ಲಿ ಭಾರತೀಯ ಜನತಾ ಪಾರ್ಟಿ  ಹಿರಿಯೂರು ಮಂಡಲದ ವತಿಯಿಂದ ಮಂಡಲ ಅಧ್ಯಕ್ಷರಾದ   ಅಭಿನಂದನ್ ಕೆ. ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ  ಭಾರತ ರತ್ನ, ಗೌರವಾನ್ವಿತ, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯ ಅವರ  101ನೇ ಜನ್ಮದಿನದ ಆಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ   ಅವರು ಮಾತನಾಡಿದರು.

ಚಿತ್ರದುರ್ಗ ಜಿಲ್ಲಾ ಬಿ.ಜೆ.ಪಿ.ಕೋರ್ ಕಮಿಟಿ ಸದಸ್ಯರಾದ ಎನ್.ಆರ್.ಲಕ್ಮೀಕಾಂತ್ ಅವರು ಮಾತನಾಡಿ ಅಟಲ್ ಬಿಹಾರಿ ವಾಜಪೇಯ ಅವರ ಜೀವನ ಚರಿತ್ರೆ, ರಾಜಕೀಯ ಪಯಣ ಹಾಗೂ ಅವರು ನಡೆದು ಬಂದ ಸತ್ಯನಿಷ್ಠ ಹಾದಿಯನ್ನು ಸ್ಮರಿಸಿ  ಅವರ ಚಿಂತನೆಗಳು ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗಬೇಕು ಎಂಬುದಾಗಿ ಅವರು ಹೇಳಿದರು.

ಅಧ್ಯಕ್ಷೀಯ ಭಾಷಣದಲ್ಲಿ ಬಿ.ಜೆ.ಪಿ.ಮಂಡಲ ಅಧ್ಯಕ್ಷರಾದ  ಅಭಿನಂದನ್ ಕೆ. ಅವರು ಮಾತನಾಡಿ  ವಾಜಪೇಯ ಅವರ ಸರಳತೆ,  ದೇಶಭಕ್ತಿ  ಹಾಗೂ ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅಪಾರ  ಕೊಡುಗೆಗಳನ್ನು ಅವರು ಮೆಲುಕು ಹಾಕಿದರು.

ಈ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲಘಟ್ಟದಲ್ಲಿ ಪಕ್ಷದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಎಂ.ಎಸ್.ರಾಘವೇಂದ್ರ, ಬಸವರಾಜ್ ನಾಯಕ್, ಸೋಮಣ್ಣ ಹಾಗೂ ರಂಗಸ್ವಾಮಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಈ ಸಂದರ್ಭದಲ್ಲಿ ಚಿತ್ರದುರ್ಗ ಬಿ.ಜೆ.ಪಿ. ನಿಕಟಪೂರ್ವ ಜಿಲ್ಲಾಧ್ಯಕ್ಷರಾದ  ಮುರುಳಿ, ಹಿರಿಯೂರು ಮಂಡಲದ ನಿಕಟಪೂರ್ವ ಅಧ್ಯಕ್ಷರಾದವಿಶ್ವನಾಥ್, ಮಂಡಲ ಪ್ರಧಾನ ಕಾರ್ಯದರ್ಶಿ  ನಿತಿನ್ ಗೌಡ, ಬಿ.ಜೆ.ಪಿ. ಹಿರಿಯ ಮುಖಂಡರುಗಳಾದ ಜೆ.ಬಿ.ರಾಜು, ಬಸವರಾಜ್ ನಾಯಕ್,  ಸೋಮಣ್ಣ, ಎಂ.ಎಸ್.ರಾಘವೇಂದ್ರ, ಮಂಜುಳಾ, ಹಾಲಪ್ಪ, ನಾಗರಾಜ್, ಅಸ್ಗರ್, ದ್ಯಾಮೇಗೌಡ, ದ್ಯಾಮಣ್ಣ, ಬಿ.ಆರ್.ರಂಗಸ್ವಾಮಿ, ಕೇಶವಮೂರ್ತಿ, ಮೋರ್ಚಾದ ಅಧ್ಯಕ್ಷರುಗಳು, ಮಂಜುನಾಥ, ಮುರುಳಿಧರ, ಪ್ರಜ್ವಲ್, ಮಿಥುನ್, ರಂಗಸ್ವಾಮಿ, ಪಾರ್ಥ, ವೇದಮೂರ್ತಿ, ರಾಕೇಶ್, ದರ್ಶನ ಸೇರಿದಂತೆ ಹಲವಾರು ಹಿರಿಯ ಮುಖಂಡರುಗಳು, ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *