
ಹಿರಿಯೂರು:
ಆಟೋಚಾಲಕರು ಎಲ್ಲೆಂದರಲ್ಲಿ ಆಟೋಗಳನ್ನು ನಿಲ್ಲಿಸದೆ, ತಮಗೆ ನಿಗದಿಪಡಿಸಿದ ಸ್ಥಳಗಳಲ್ಲಿಯೇ ನಿಲುಗಡೆ ಮಾಡುವುದು ಹಾಗೂ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂಬುದಾಗಿ ನಗರ ಪೊಲೀಸ್ ಠಾಣೆ ಪಿ.ಎಸ್.ಐ. ಶಶಿಕಲಾ ಅವರು ಹೇಳಿದರು.
ನಗರ ಪೊಲೀಸ್ ಠಾಣೆಯಲ್ಲಿ ನಗರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಆಟೋ ಚಾಲಕರಿಗೆ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಾಹನದ ದಾಖಲಾತಿಗಳನ್ನು ಕಾಲಕಾಲಕ್ಕೆ ನವೀಕರಣೊಳಿಸಿಕೊಂಡು ನಿರ್ವಹಣೆ ಇಟ್ಟುಕೊಳ್ಳತಕ್ಕದ್ದು, ಆಟೋಗಳಲ್ಲಿ ಮಿತಿಮೀರಿ ಪ್ರಯಾಣಿಕರನ್ನು ಹಾಕುವುದು ಜೀವಕ್ಕೆ ಅಪಾಯಕಾರಿ ಹಾಗೂ ಕಾನೂನಿನ ಉಲ್ಲಂಘನೆ ಮಾಡಬಾರದು ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ನೂರಾರುಜನ ಆಟೋಚಾಲಕರು ಮತ್ತು ಆಟೋ ಮಾಲಿಕರು ಉಪಸ್ಥಿತರಿದ್ದರು.
