
ಹಿರಿಯೂರು:
ನಗರದ ಇನ್ನರ್ ವೀಲ್ ಕ್ಲಬ್ ವತಿಯಿಂದ ಮಾರಿಕಾಂಬ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರಿಗೆ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಬಿ.ಪಿ., ಶುಗರ್, ಚೆಕ್ ಅಪ್ ಮಾಡಲಾಯಿತು ಹಾಗೂ ಬ್ಲಾಂಕೇಟ್ ಗಳನ್ನು ಮತ್ತು ಸ್ವಚ್ಚತಾ ಸಾಮಾಗ್ರಿಗಳನ್ನು ಕ್ಲಬ್ ವತಿಯಿಂದ ಕೊಡಲಾಯಿತು.

ಈ ಸಂದರ್ಭದಲ್ಲಿ ಇನ್ನರ್ ವೀಲ್ ಅಧ್ಯಕ್ಷರಾದ ರೋಷಣಿಮಹೇಶ್, ಕಾರ್ಯದರ್ಶಿ ಸರ್ವಮಂಗಳರಮೇಶ್, ಹೇಮಲತಾ, ಪದ್ಮಆನಂದ್, ರೂಪ, ಪದ್ಮಮಂಜೇಶ್ ಹಾಗೂ ಸಂಶೋಧನ ತಂತ್ರಜ್ಞಅಧಿಕಾರಿಯಾದ ನಿರ್ಮಲ ಮಹಾಂತೇಶ್, ಸಂಸ್ಥೆಯ ಕಾರ್ಯದರ್ಶಿ ಕೃಷ್ಣಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

