
ಹಿರಿಯೂರು:
ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಿರುವ 66/11 ಕೆವಿ ವಿದ್ಯುತ್ ಉಪಕೇಂದ್ರವನ್ನು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಉದ್ಘಾಟಿಸಿ 15 ದಿನಗಳು ಕಳೆದಿವೆ.
ಇದೀಗ ವಿದ್ಯುತ್ ಉಪಕೇಂದ್ರದಿಂದ ಕೃಷಿ ಪಂಪ್ ಸೆಟ್ ಗಳಿಗೆ ವಿರವ್ವನಾಗತಿಹಳ್ಳಿ, ಬಾಲದೇವರಟ್ಟಿ, ದಿಂಡಾವರ ಹಲವಾರು ಗ್ರಾಮಗಳಿಗೆ ವಿಶೇಷ ಅನುದಾನ ಕೊಡಿಸಿ ಲಿಂಕ್ ಲೈನ್ ಮಾಡಿಸಿ ಕೃಷಿ ಪಂಪ್ಸೆಟ್ ಗಳಿಗೆ ಮತ್ತು ನಿರಂತರ ಜ್ಯೋತಿಗೆ ವಿದ್ಯುತ್ ಚಾಲನೆ ನೀಡಲಾಯಿತು.

ರೈತರ ಕಷ್ಟವನ್ನು ಅರಿತ ಸಚಿವರು 2018ರಲ್ಲಿ ಶಾಸಕರಾಗಿ ಇದಕ್ಕೆ ಅಡಿಪಾಯ ಪೂಜೆ ಮಾಡಿದರು. ಅಂದಿನಿಂದ ಇಂದಿನವರೆಗೂ ಹಾಗೆ ಉಳಿದಿದ್ದು, 2023ರಲ್ಲಿ ಸಚಿವರಾಗಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ದಿಂಡಾವರ ಭಾಗದ ರೈತರಿಗೆ ವರದಾನವಾಗಿದೆ ಎಂಬುದಾಗಿ ರೈತರು ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಉಪಕೇಂದ್ರದಿಂದ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ನಮ್ಮ ದಿಂಡಾವರ ಭಾಗದ ರೈತರ ಪರವಾಗಿ ಸಚಿವರಾದ ಡಿ.ಸುಧಾಕರ್ ರವರಿಗೆ ತುಂಬು ಹೃದಯಪೂರ್ವಕ ಧನ್ಯವಾದಗಳು ಎಂಬುದಾಗಿ ಯುವ ರೈತ ಪುನೀತ್ ಗೌಡ ವೀರವ್ವ ನಾಗತಿಹಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ದಿಂಡಾವರ ಗ್ರಾಮದ ಮುಖಂಡರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

