March 2, 2026
0002

ಹಿರಿಯೂರು:

ತಾಲ್ಲೂಕು ಗೊರಲ್ಲಡಕು ಗ್ರಾಮದ ಡಾ.ಜಗನ್ನಾಥ್ ಅವರು ಹಿರಿಯೂರು ವಾಣಿವಿಲಾಸ ಸಕ್ಕರೆ ಕಾರ್ಖಾನೆಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, ಕಳೆದು ನಾಲ್ಕೈದು ದಶಕಗಳಿಂದ ವೇದಾವತಿ ನಗರದ ಡಬಲ್ ರೋಡ್ ನಲ್ಲಿ ಬಡವರ ಪಾಲಿನ ಆಪತ್ಬಾಂಧವರಾಗಿ ರೋಗ ವಾಸಿಮಾಡುತ್ತಿದ್ದಾರೆ ಇವರು ಶತಮಾನ ಪೂರೈಸಲಿ ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿ ರಮೇಶ್ ಶುಭಹಾರೈಸಿದ್ದಾರೆ.

ಈ ಭಾಗದ ಜನರಿಗೆ ಕೈಗೆಟುಕುವ ಧರದಲ್ಲಿ ಉತ್ತಮ ಆರೋಗ್ಯ ಸೇವೆ ನೀಡುತ್ತಾ ಬಂದಿರುವ ಇವರ ಸೇವೆ ಪಡೆಯದಿರುವ ನಾಗರೀಕರಿಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಪ್ರೀತಿಯಿಂದ ಯೋಗಕ್ಷೇಮ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುತ್ತಾ ಜನಮೆಚ್ಚುಗೆ ಪಡೆದಿರುವ ಇವರು 75 ವರ್ಷ ವಯಸ್ಸು ತುಂಬಿ 76ನೇ ವರ್ಷಕ್ಕೆ ಪಾದರ್ಪಣೆ ಮಾಡಿದ್ದಾರೆ, ಇವರಿಗೆ ಭಗವಂತ ಸದಾ ಸಿರಿ ಸಂಪತ್ತು ಕೊಟ್ಟು ಕಾಪಾಡಲಿ ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಬಡವರ ವೈದ್ಯ ಶ್ರೀಯುತ ಡಾ.ಜಗನ್ನಾಥ್ ಅವರಿಗೆ ಶಾಲು ಹೊದಿಸಿ, ಪೇಟ ಇಟ್ಟು ಹೂವಿನ ಮಾಲೆ ಹಾಕಿ, ಸನ್ಮಾನಿಸಿ, ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ನೀರಾವರಿ ಹೋರಾಟ ಸಮಿತಿ ನಿರ್ದೇಶಕರಾದ ಪಿಟ್ಲಾಲಿ ಶ್ರೀನಿವಾಸ್, ರಾಜ್ಯಮಟ್ಟದ ಸಹಕಾರಿ ನಿರ್ದೇಶಕ ಹಾಗೂ ತಾಲ್ಲೂಕು  ವ್ಯವಸಾಯ ಉತ್ಪನ್ನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರವಣಗೆರೆ ಹನುಮಂತರಾಯ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಜಿ.ಹನುಮಂತರಾಯ, ಜೆ.ಡಿ.ಎಸ್. ಮುಖಂಡ ಹಾಗೂ ಕೆ.ಆರ್.ಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪಿಟ್ಲಾಲಿ ಶ್ರೀನಿವಾಸ್ (ಬಂಗಾರಪ್ಪ), ಸಕ್ಕರೆ ಕಾರ್ಖಾನೆ, ನಿವೃತ್ತ ನೌಕರ ಮೂಡಲಗಿರಿ ನಾಯಕ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *