March 2, 2026
00001

ಹಿರಿಯೂರು:

ನಗರದ ದಕ್ಷಿಣಕಾಶಿ ಶ್ರೀ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ತಹಶೀಲ್ದಾರ್ ರಾದ ಎಂ.ಸಿದ್ದೇಶ್ ಅವರ ನೇತೃತ್ವದಲ್ಲಿ ಶ್ರೀ ತೇರುಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ  ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.

ಈ ಸಭೆಯಲ್ಲಿ ಜಾತ್ರೆ ಹಾಗೂ ರಥೋತ್ಸವವನ್ನು ಭಕ್ತಿ-ಭಾವದಿಂದ ವಿಜೃಂಭಣೆಯಿಂದ ಆಚರಿಸಲು ಬೇಕಾದ ಕೆಲಸ-ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಜನವರಿ 24ರ ಶನಿವಾರ ಕಂಕಣೋತ್ಸವ,  ಫೆಬ್ರವರಿ 1ರಂದು ಕಳಸ ಸ್ಥಾಪನೆ,  ಫೆಬ್ರವರಿ 2ರಂದು ದೊಡ್ಡ ಉತ್ಸವ,  ಫೆಬ್ರವರಿ3ರ ಮಂಗಳವಾರ 12ರಿಂದ 1ಗಂಟೆ ಒಳಗೆ  ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ ಎಂಬುದಾಗಿ ತಹಶೀಲ್ದಾರ್ ರಾದ ಎಂ.ಸಿದ್ದೇಶ್ ಅವರು  ಹೇಳಿದರು.

ಫೆಬ್ರವರಿ 5ರ ಗುರುವಾರ ಸಂಜೆ 7ಗಂಟೆಯಿಂದ  ಕರ್ಪೂರದಾರತಿ ಕಾರ್ಯಕ್ರಮ ನಡೆಯಲಿದೆ.6ರಂದು ಓಕಳಿ ಪಾರ್ವಟೋತ್ಸವ 7ರಂದು ಕಂಕಣ ವಿಸರ್ಜನೆ ಕಾರ್ಯಕ್ರಮ ನಡೆಸಲಾಗುವುದು ಎಂಬುದಾಗಿ ಅವರು ಹೇಳಿದರು.

ನಗರಸಭೆ ಮಾಜಿ ಸದಸ್ಯರಾದ ಹೆಚ್.ಎಸ್.ಅನಿಲ್ ಕುಮಾರ್ ಇವರನ್ನು ಜಾತ್ರಾ ಸಮಿತಿಯ ಅಧ್ಯಕ್ಷರಾಗಿ  ಹಾಗೂ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಾತ್ರಾ ಸಮಿತಿಯ ಅಧ್ಯಕ್ಷರಾದ ಆರ್.ನಾಗೇಂದ್ರನಾಯ್ಕ್  ಅವರು ಮಾತನಾಡಿ 2ರಥಗಳನ್ನು ನವೀಕರಿಸಬೇಕು.ಅದಕ್ಕೆ ನಾನು ಸ್ವಂತ 5ಲಕ್ಷಗಳ ದೇಣಿಗೆ ನೀಡುತ್ತೇನೆ ಎಂಬುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಮುಖಂಡರಾದ ಸತ್ಯನಾರಾಯಣಮೂರ್ತಿ, ವೆಂಕಟೇಶ್, ನಾಗೇಂದ್ರ ನಾಯ್ಕ್, ಜಿ.ಎಲ್.ಮೂರ್ತಿ, ಅನಿಲ್ ಕುಮಾರ್, ಬಿ.ಎನ್.ಪ್ರಕಾಶ್, ವೆಂಕಟೇಶ್, ಉಮೇಶ್ ಗುಡಾಣಮಠ, ಜಗದೀಶ್ ಬಂಡಾರಿ, ಭೋಜಣ್ಣ, ದಿವುಶಂಕರ್, ರುದ್ರಮುನಿ, ಅನಿಲ್ ಕುಮಾರ್, ರವಿ, ಲೋಕೇಶ್, ಕೃಷ್ಣಪೂಜಾರ್, ಎಂ.ಪಿ.ರಾಜು, ಕೃಷ್ಣ, ಪಿ.ಎಸ್.ಐ.ಲಕ್ಷ್ಮೀನಾರಾಯಣ, ಎಂ.ರವೀಂದ್ರನಾಥ್, ಪುರೋಹಿತರಾದ ಪ್ರಸನ್ನಕುಮಾರ್, ವಿಶ್ವನಾಥ್ ಆಚಾರ್ಯ, ಶ್ರೀಕಂಠಾಚಾರ್ಯ, ನಾಗರಾಜಚಾರ್ಯ, ಮಲ್ಲೇಶ್ಆಚಾರ್ಯ, ರೆವೆನ್ಯೂ ಇಲಾಖೆಯ ಸ್ವಾಮಿಮಯವರ್ಮ, ಟಿ.ರಾಜುಶ್ವೇತಾ, ಚಿಕ್ಕಳ್ಳಿನಾಯಕ ಸೇರಿದಂತೆ ಕೈವಾಡಸ್ತರುಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *